ಪೋಲಿಯೊ ಪೀಡಿತ ಯುವತಿ ಮೇಲೆ ಅತ್ಯಾಚಾರ, ಕಂಬಕ್ಕೆ ಕಟ್ಟಿ ಥಳಿಸಿದ ಅಣ್ಣಂದಿರು

polio-ridden girl abused by neighbor

[ Kannada News Today ] : Crime News

ಹೈದರಾಬಾದ್ : ತೆಲಂಗಾಣದ ವಾರಂಗಲ್ ಜಿಲ್ಲೆಯ ರಾಯಪರ್ತಿ ಮಂಡಲದ ಕತ್ರಿಪಲ್ಲಿ ಗ್ರಾಮದಲ್ಲಿ ಅಂಗವಿಕಲ ಬಾಲಕಿಯ ಮೇಲೆ ಆಕೆಯ ನೆರೆಯ ವಾಸಿ ಅತ್ಯಾಚಾರ ಎಸಗಿದ್ದಾರೆ.

ರಾಯಪರ್ತಿ ಪೊಲೀಸರು, ಈ ಸಂಬಂಧ ವಂಗಪಲ್ಲಿ ಯೆಲ್ಲಸ್ವಾಮಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಅವನನ್ನು ಸ್ಥಳೀಯ ನಿವಾಸಿಗಳು ಹಾಗೂ ಯುವತಿಯ ಅಣ್ಣಂದಿರು ಹಿಡಿದು ಕಂಬಕ್ಕೆ ಕಟ್ಟಿಹಾಕಿ, ಪೊಲೀಸರಿಗೆ ಒಪ್ಪಿಸುವ ಮೊದಲು ಆತನನ್ನು ಚನ್ನಾಗಿ ಥಳಿಸಿದ್ದರು.

ಮೂಲಗಳ ಪ್ರಕಾರ, ಯುವತಿ ತನ್ನ ಬಾಲ್ಯದಿಂದಲೂ ಪೋಲಿಯೊದಿಂದ ಬಳಲುತ್ತಿದ್ದಾಳೆ. ಇದರಿಂದಾಗಿ, ಅವಳು ಎಲ್ಲೂ ಹೋಗದೆ ಮನೆಗೆ ಸೀಮಿತವಾಗಿದ್ದಳು. ಶುಕ್ರವಾರ, ಆಕೆಯ ಪೋಷಕರು ಕೆಲಸಕ್ಕೆ ತೆರಳಿದಾಗ, ಅದೇ ಕಾಲೋನಿಯಲ್ಲಿ ವಾಸಿಸುತ್ತಿರುವ ಆರೋಪಿ ಏಕಾಏಕಿ ಆಕೆಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ.

ಸ್ವಲ್ಪ ಸಮಯದ ನಂತರ, ನೆರೆಹೊರೆಯವರು ಅವನು ಆಕೆಯ ಮನೆಯಿಂದ ಗಾಬರಿಯಿಂದ ಪಲಾಯನ ಮಾಡುವುದನ್ನು ನೋಡಿದ್ದರು. ಏತನ್ಮಧ್ಯೆ, ಸಂತ್ರಸ್ತೆಯ ಸಹೋದರ ಕಾಲೇಜಿನಿಂದ ಮನೆಗೆ ಹಿಂದಿರುಗಿದಾಗ, ಸಹೋದರಿ ನಡೆದ ವಿಷಯವನ್ನು ಅವರಿಗೆ ತಿಳಿಸಿದ್ದಾಳೆ. ಅಕ್ಕಪಕ್ಕದ ಮನೆಯವರು ಸಹ ಯೆಲ್ಲಸ್ವಾಮಿ ಮನೆಯಿಂದ ಹೊರಬರುವುದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.

ವಿಷಯ ಊರೆಲ್ಲಾ ಹಬ್ಬುತ್ತಿದ್ದಂತೆ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಆರೋಪಿಯನ್ನು ಹಿಡಿದು, ಪೊಲೀಸರು ಬರುವ ಮೊದಲೇ ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಲಾಯಿತು. ರಾಯಪರ್ತಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಆರೋಪಿಗಯನ್ನು ಬಂಧಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

Web Title : polio-ridden girl abused by neighbor
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube ಅನುಸರಿಸಿ.