ಪ್ರೀತಿ ಯಾಕೆ ಭೂಮಿ ಮೇಲಿದೆ ? ಎಂಬ ಕಾಮಪ್ರಚೋದಕ FB ಅಡ್ಡ
Preeti Yake Bhumi Melide-the Pornography FaceBook Page
ಪ್ರೀತಿ ಯಾಕೆ ಭೂಮಿ ಮೇಲಿದೆ ? ಎಂಬ ಕಾಮಪ್ರಚೋದಕ FB ಅಡ್ಡ
ಸಾರ್ವಜನಿಕ ಫೇಸ್ ಬುಕ್ ಪುಟಗಳಲ್ಲಿ ಇಲ್ಲ ಸಲ್ಲದ ಚಿತ್ರಗಳನ್ನೂ, ವಿಡಿಯೋ, ಅಶ್ಲೀಲತೆಯನ್ನು ಪ್ರದರ್ಶನ ಮಾಡುವವರ ಬಗ್ಗೆ ಪೋಲಿಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅದೆಲ್ಲಾ ತಿಳಿದಿದ್ದು ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.
ಅಶ್ಲೀಲತೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಫೇಸ್ ಬುಕ್ ಪುಟಗಳು ಅಸಭ್ಯ ಪೋಟೋ ವಿಡಿಯೋ ಪೋಸ್ಟ್ ಮಾಡಿ ವಿಕೃತ ಆನಂದ ಪಡುತ್ತಿವೆ.
ಮೊದ ಮೊದಲು ಕವಿ , ಜ್ಞಾನಿ , ಸಾಮಾಜಿಕ ಒಳಿತು ಅಂತ ಪೇಜ್ ಕ್ರಿಯೇಟ್ ಮಾಡಿ ಸಾವಿರಾರು ಜನರನ್ನು ಗ್ರೂಪ್ ಗೆ ಬರಮಾಡಿಕೊಂಡು, ನಂತರ ಇವರ ಒರಸೆ ತೋರಿಸುತ್ತಾರೆ.
ಪ್ರೀತಿ ಯಾಕೆ ಭೂಮಿ ಮೇಲಿದೆ ? Face Book Page ಯಾಕೆ ಪೊಲೀಸರ ಕಣ್ಣಿಗೆ ಬಿದ್ದಿಲ್ಲ ಎಂಬುದೇ ಯಕ್ಷ ಪ್ರಶ್ನೆ , ಮೊನ್ನೆ ಮೊನ್ನೆಯಷ್ಟೇ ಬೆಳಗಾವಿಯಲ್ಲಿ ಇಂತಹದ್ದೇ ಪ್ರಕರಣದಲ್ಲಿ ಪೇಜ್ ಅಡ್ಮಿನ್ ಒಬ್ಬ ಪೋಲೀಸರ ಅಥಿತಿಯಾಗಿದ್ದಾನೆ.
ಇದು ಈಗೆ ಮುಂದುವರೆಯಲು ಬಿಟ್ಟರೆ ಸಮಾಜ ಘಾತುಕ ಪ್ರಕರಣಗಳು ನಡೆಯುವುದಂತೂ ಕಟ್ಟಿಟ್ಟ ಬುತ್ತಿ. ಅಮಾಯಕ ಹೆಣ್ಣು ಮಕ್ಕಳನ್ನೂ ಟಾರ್ಗೆಟ್ ಮಾಡುವ ಪೋಲಿ ಜನರ ದೊಡ್ಡ ಗುಂಪೇ ಈ ಪುಟದಲ್ಲಿ ಇದ್ದಾರೆ.
ಇನ್ನು
ಪ್ರೀತಿ ಯಾಕೆ ಭೂಮಿ ಮೇಲಿದೆ ಗ್ರೂಪ್ ನವರು ಈ ಬಗ್ಗೆ ಹೇಳೋದೇನು ಗೊತ್ತಾ …
ಗ್ರೂಪಿನಲ್ಲಿ ಕೆಲವು ಅಶ್ಲೀಲ ಕಮೆಂಟುಗಳನ್ನು ವಿದೇಶೀಯರು ಮಾಡುತ್ತಿದ್ದಾರೆ ಇದು ವೈರಸಾಗಿದ್ದು ದಯಾಮಡಿ ಕ್ಲಿಕ್ ಮಾಡಬೇಡಿ. ಸಾಧ್ಯವಾದಷ್ಟು ರಿಪೋರ್ಟ್ ಮಾಡಿ. ನಾವು ಹಲವಾರು ಕಮೆಂಟುಗಳನ್ನು ಅಳಿಸಿ ಹಾಕಿದರೂ ಅದು ಮತ್ತೆ ಮತ್ತೆ ಬರುತ್ತಿದೆ.
ಸಾಧ್ಯವಾದಷ್ಟು ಶೇರ್ ಮಾಡಿ
ಅಬ್ಬಾ ಯಾರು ಇಲ್ಲಿ ಕಿವಿಗೆ ಹೂ ಇಟ್ಟಿಲ್ಲ , ಎಲ್ಲಾ ಪೇಜ್ ಅಡ್ಮಿನ್ ಗೆ ಯಾರನ್ನೇ ಅಥವಾ ಏನನ್ನೇ ಆಗಲಿ ಬ್ಲಾಕ್ ಮಾಡುವ ಸೌಲಭ್ಯ ಇದೆ. ಆದರೆ ಇದನ್ನು ಪರೋಕ್ಷವಾಗಿ ಸಹಕರಿಸಲು ಇದೆಲ್ಲಾ ಹಗಲುವೇಷ ತೊಟ್ಟಿದ್ದಾರೆ.
ಈ ಪೋಸ್ಟ್ ಆಗಿರುವ ನಖಲಿ ಖಾತೆದಾರ ಯಾವುದೋ ಮುದುಕಪ್ಪನ ಫೋಟೋ ಆಕಿ ಅಸಭ್ಯ ಪೋಟೋಗಳನ್ನು ಆಕುತ್ತಿದ್ದಾನೆ..
ಮಾನ್ಯ ಪೋಲಿಸ್ ಇಲಾಖೆಯು ಹಾಗೂ ಸೈಬರ್ ಕ್ರೈಂ ತಂಡವು ಈ ಪ್ರೀತಿ ಯಾಕೆ ಭೂಮಿ ಮೇಲಿದೆ ? ಎಂಬ ಪೇಸ್ ಬುಕ್ ಪೇಜ್ ಅಡ್ಮಿನ್ ಅನ್ನು ಬಂದಿಸಿ ವಿಚಾರಣೆ ನಡೆಸಬೇಕಾಗಿ ಸಾಮಾಜಿಕ ಜಾಲ ತಾಣ ಹಲವರು ಮನವಿ ಮಾಡಿದ್ದಾರೆ. ////
WebTitle : ಪ್ರೀತಿ ಯಾಕೆ ಭೂಮಿ ಮೇಲಿದೆ ? ಎಂಬ ಕಾಮಪ್ರಚೋದಕ FB ಅಡ್ಡ-Preeti Yake Bhumi Melide-the Pornography FaceBook Page
>>> ಕ್ಲಿಕ್ಕಿಸಿ : Karnataka Crime News | Kannada Crime News