ಕುಟುಂಬ ಕಲಹ.. ತಂದೆ-ಮಗಳು ಸಾವು, ಐವರಿಗೆ ಗಾಯ

ಕುಟುಂಬ ಸದಸ್ಯರ ನಡುವಿನ ಜಗಳ ಧಾರುಣ ಎರಡು ಸಾವಿನಲ್ಲಿ ಅಂತ್ಯವಾಗಿದೆ. ಒಂದೇ ಕುಟುಂಬದ ವ್ಯಕ್ತಿಗಳು ಪರಸ್ಪರ ದಾಳಿ ಮಾಡಿ ಕೊಂಡಿದ್ದಾರೆ. ಹರಿತವಾದ ಆಯುಧಗಳಿಂದ ಇರಿದಿದ್ದಾರೆ. ಘಟನೆಯಲ್ಲಿ 60 ವರ್ಷದ ವ್ಯಕ್ತಿ ಮತ್ತು ಆತನ ಗರ್ಭಿಣಿ 36 ವರ್ಷದ ಮಗಳು ಪ್ರಾಣ ಕಳೆದುಕೊಂಡಿದ್ದಾರೆ.

ಜೈಪುರ: ಕುಟುಂಬ ಸದಸ್ಯರ ನಡುವಿನ ಜಗಳ ಧಾರುಣ ಎರಡು ಸಾವಿನಲ್ಲಿ ಅಂತ್ಯವಾಗಿದೆ. ಒಂದೇ ಕುಟುಂಬದ ವ್ಯಕ್ತಿಗಳು ಪರಸ್ಪರ ದಾಳಿ ಮಾಡಿ ಕೊಂಡಿದ್ದಾರೆ. ಹರಿತವಾದ ಆಯುಧಗಳಿಂದ ಇರಿದಿದ್ದಾರೆ. ಘಟನೆಯಲ್ಲಿ 60 ವರ್ಷದ ವ್ಯಕ್ತಿ ಮತ್ತು ಆತನ ಗರ್ಭಿಣಿ 36 ವರ್ಷದ ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ರಾಜಸ್ಥಾನದ ಜೈಪುರದ ಚಾಟ್‌ಗೇಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಸಬೀರ್ ಖಾನ್ (60) ಮತ್ತು ನಫೀಸಾ (36) ಎಂದು ಗುರುತಿಸಲಾಗಿದೆ.

ಗಾಯಗೊಂಡ ಐವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬ ಕಲಹ.. ತಂದೆ-ಮಗಳು ಸಾವು, ಐವರಿಗೆ ಗಾಯ - Kannada News

Follow us On

FaceBook Google News