ಭಾರತ–ಪಾಕ್ ಗಡಿಯ ಹೊಲದಲ್ಲಿ ಟಿಫಿನ್ ಬಾಕ್ಸ್ ಬಾಂಬ್ ಪತ್ತೆ

ಭಾರತ-ಪಾಕ್ ಗಡಿಯಲ್ಲಿರುವ ಫಿರೋಜ್‌ಪುರ ಜಿಲ್ಲೆಯ ಜಮೀನೊಂದರಿಂದ ಪೊಲೀಸರು ಟಿಫಿನ್ ಬಾಂಬ್‌ಗಳ ಬಾಕ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. 

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಗಡಿಯಲ್ಲಿ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿದ್ದಾರೆ. ಭಾರತ-ಪಾಕ್ ಗಡಿಯಲ್ಲಿರುವ ಫಿರೋಜ್‌ಪುರ ಜಿಲ್ಲೆಯ ಜಮೀನೊಂದರಿಂದ ಪೊಲೀಸರು ಟಿಫಿನ್ ಬಾಂಬ್‌ಗಳ ಬಾಕ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ ಜಲಾಲಾಬಾದ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಅಳಿಕೆ ಗ್ರಾಮದಲ್ಲಿ ಪೊಲೀಸರಿಗೆ ಟಿಫಿನ್ ಬಾಕ್ಸ್ ಬಾಂಬ್ ಪತ್ತೆಯಾಗಿದೆ. ಜಲಾಲಾಬಾದ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸುತ್ತಿದೆ.

ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತ್ ಸಿಂಗ್ ಅಲಿಯಾಸ್ ಗೋರಾಗೆ ಆಶ್ರಯ ನೀಡಿದ್ದ ಇಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ರುಗ್ಗೆ ನಿಹಂಗಾ ವಾಲೆ ಗ್ರಾಮದ ನಿವಾಸಿ ಜಶ್ವಂತ್ ಸಿಂಗ್ ಅಲಿಯಾಸ್ ಶಿಂದಾ ಬಾಬಾ ಮತ್ತು ಲುಧಿಯಾನದ ವಾಲಿಪುರ್ ಖುರ್ದ್ ನಿವಾಸಿ ಬಲ್ವಂತ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಂಜಿತ್ ಸಿಂಗ್ ಅಲಿಯಾಸ್ ಗೋರಾ ಅವರನ್ನು ಕೂಡ ಬಂಧಿಸಲಾಗಿದೆ ಎಂದು ಪಂಜಾಬ್ ಡಿಜಿಪಿ ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ಹೇಳಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today