ರೈಲು ಎಂಜಿನ್ ಮಾರಾಟ ಮಾಡಿದ ಭೂಪ !

ಕಿಲಾಡಿ ವ್ಯಕ್ತಿಯೊಬ್ಬ ನಕಲಿ ದಾಖಲೆ ಸಮೇತ ಲೋಕೋಮೋಟಿವ್ ರೈಲು ಎಂಜಿನ್ ಮಾರಾಟ ಮಾಡಿದ್ದಾನೆ.

Online News Today Team

ಪಾಟ್ನಾ: ಕಿಲಾಡಿ ವ್ಯಕ್ತಿಯೊಬ್ಬ ನಕಲಿ ದಾಖಲೆ ಸಮೇತ ಲೋಕೋಮೋಟಿವ್ ರೈಲು ಎಂಜಿನ್ ಮಾರಾಟ ಮಾಡಿದ್ದಾನೆ. ಬಿಹಾರದ ಸಮಸ್ತಿಪುರ ರೈಲ್ವೆ ವಿಭಾಗದಲ್ಲಿ ಎಂಜಿನಿಯರ್ ಆಗಿರುವ ರಾಜೀವ್ ರಂಜನ್ ಝಾ ಈ ಕೆಲಸ ಮಾಡಿದ್ದಾನೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ತಿಂಗಳ 14ರಂದು ಭದ್ರತಾ ಸಿಬ್ಬಂದಿಗಳ ನೆರವಿನೊಂದಿಗೆ ಪೂರ್ಣಿಯಾ ಕೋರ್ಟ್ ಸ್ಟೇಷನ್ ನಲ್ಲಿ ಹಳೆಯ ಸ್ಟೀಮ್ ಎಂಜಿನ್ ಮಾರಾಟ ಮಾಡಿದ್ದರು. ಇತ್ತೀಚೆಗೆ ಈ ಘಟನೆ ಬೆಳಕಿಗೆ ಬಂದಿದೆ.

ಇಂಜಿನಿಯರ್ ಸೇರಿದಂತೆ 8 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂಜಿನಿಯರ್ ಅವರನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.

Follow Us on : Google News | Facebook | Twitter | YouTube