Welcome To Kannada News Today

Crime News: ಅತ್ಯಾಚಾರ ಆರೋಪಿಯ ಶವ ಹೈದರಾಬಾದ್‌ನ ರೈಲ್ವೆ ಟ್ರ್ಯಾಕ್‌ನಲ್ಲಿ ಪತ್ತೆ

Rape accused Dead body found on the railway track: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಶವ ಹೈದರಾಬಾದ್‌ನ ರೈಲ್ವೆ ಟ್ರ್ಯಾಕ್‌ನಲ್ಲಿ ಪತ್ತೆಯಾಗಿದೆ, ತೆಲಂಗಾಣ ಸಚಿವರು 2 ದಿನಗಳ ಹಿಂದೆ ಎನ್ಕೌಂಟರ್‌ನಲ್ಲಿ ಕೊಲ್ಲುವುದಾಗಿ ಹೇಳಿಕೆ ನೀಡಿದ್ದರು

🌐 Kannada News :

Rape accused Dead body found on the railway track: ತೆಲಂಗಾಣದಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಯ ಮೃತದೇಹ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ. ದೇಹದಲ್ಲಿ ಇದ್ದ ಟ್ಯಾಟೂಗಳಿಂದ ಪೊಲೀಸರು ಆತನನ್ನು ಗುರುತಿಸಿದ್ದಾರೆ.

ಹೈದರಾಬಾದ್ ನ ಸಿಂಗರೇಣಿ ಕಾಲೋನಿಯಲ್ಲಿ ಅತ್ಯಾಚಾರ ಮತ್ತು ಕೊಲೆ ಮಾಡಿದ್ದ ಆರೋಪಿ ಪಿ ರಾಜು (30) ಮೃತದೇಹ ಎಂದು ತೆಲಂಗಾಣ ಡಿಜಿಪಿ ದೃಡಪಡಿಸಿದ್ದಾರೆ.

ಇದನ್ನೂ ಓದಿ : Bangalore Accident: ಭಯಂಕರ ಆಕ್ಸಿಡೆಂಟ್, ಮೆಲ್ಸೇತುವೆಯಿಂದ ಬಿದ್ದು ಮೂವರ ಸಾವು

ಆರೋಪಿಯ ಶವ ಪತ್ತೆಯಾದ ನಂತರ, ಪ್ರತಿಪಕ್ಷಗಳು ಹೈದರಾಬಾದ್ ಪೊಲೀಸ್ ಮತ್ತು ಸರ್ಕಾರದ ಮೇಲೆ ಪ್ರಶ್ನೆಗಳನ್ನು ಎತ್ತುತ್ತಿವೆ, ಏಕೆಂದರೆ ಎರಡು ದಿನಗಳ ಹಿಂದೆ, ರಾಜ್ಯದ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ನಾವು ಆರೋಪಿಗಳನ್ನು ಎನ್ಕೌಂಟರ್ ನಲ್ಲಿ ಕೊಲ್ಲುತ್ತೇವೆ ಎಂದು ಹೇಳಿದ್ದರು.

ಪಿ ರಾಜು ಈ ಪ್ರಕರಣದ ಆರೋಪಿ. ಆತನನ್ನು ಬಂಧಿಸಲು ತೆಲಂಗಾಣ ಪೊಲೀಸರು 15 ತಂಡಗಳನ್ನು ರಚಿಸಿದ್ದರು ಮತ್ತು ಈ ತಂಡಗಳನ್ನು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿತ್ತು. ಈ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.

ಅತ್ಯಾಚಾರ ಆರೋಪಿಯ ಶವ ಹೈದರಾಬಾದ್‌ನ ರೈಲ್ವೆ ಟ್ರ್ಯಾಕ್‌ನಲ್ಲಿ ಪತ್ತೆ
ಅತ್ಯಾಚಾರ ಆರೋಪಿಯ ಶವ ಪತ್ತೆ

English Summary

body of the accused of rape and murder of a 6-year-old girl was found on the railway track.

The police have identified him from the tattoos made on the body. Telangana DGP has confirmed that the body is of P Raju (30), accused of rape and murder in Hyderabad’s Singareni Colony.

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today