ಮದುವೆಯಾಗಿ ನಾಲ್ಕು ದಿನವೂ ಆಗಿಲ್ಲ.. ಅಪಘಾತದಲ್ಲಿ ನವದಂಪತಿಗಳು ಸಾವು

ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಸೋಮವಾರ ನಡೆದ ಅಪಘಾತದಲ್ಲಿ ನವದಂಪತಿ ಸಾವನ್ನಪ್ಪಿರುವುದು ಕುಟುಂಬಗಳಲ್ಲಿ ತೀವ್ರ ದುಃಖ ಉಂಟು ಮಾಡಿದೆ.

ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಸೋಮವಾರ ನಡೆದ ಅಪಘಾತದಲ್ಲಿ ನವದಂಪತಿ ಸಾವನ್ನಪ್ಪಿರುವುದು ಕುಟುಂಬಗಳಲ್ಲಿ ತೀವ್ರ ದುಃಖ ಉಂಟು ಮಾಡಿದೆ.

ತಮಿಳುನಾಡಿನ ಅರಕ್ಕೋಣಂ ಮೂಲದ ಮನೋಜ್ ಕುಮಾರ್ (31) ಮತ್ತು ತಾಂಬರಂ ಪೆರುಂಗಲತ್ತೂರ್‌ನ ಕಾರ್ತಿಕಾ (30) ನಾಲ್ಕು ದಿನಗಳ ಹಿಂದೆ ಅಕ್ಟೋಬರ್ 28 ರಂದು ವಿವಾಹವಾದರು.

ಮದುವೆಯ ನಂತರ ಅರಕ್ಕೋಣಂ ನವದಂಪತಿಗಳು ಪೆರುಂಗಲ್ತೂರಿನಿಂದ ಕಾರಿನಲ್ಲಿ ಹೊರಟಿದ್ದರು. ದಂಪತಿ ಪ್ರಯಾಣಿಸುತ್ತಿದ್ದ ಕಾರು…. ಹೊಸ ಸಂಬಂಧ…  ಹೊಸ ಜೀವನದ ಕುರಿತು ಮಾತನಾಡುತ್ತ ಸಾಗುತ್ತಿದ್ದ ವೇಳೆ ಅರೆಗುಂಟ ಕಡೆಯಿಂದ ಬಂದ ಸಿಮೆಂಟ್ ಟ್ಯಾಂಕರ್ ಲಾರಿ ನಿಯಂತ್ರಣ ತಪ್ಪಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.

ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನವದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಮದುವೆಯಾಗಿ ಹೊಸ ಸೊಸೆಯೊಂದಿಗೆ ಮನೆಗೆ ಬರಬೇಕು ಎಂದುಕೊಂಡಿದ್ದ ಮಗ ಶವವಾಗಿ ಮನೆಗೆ ಬಂದಾಗ ತಂದೆ-ತಾಯಿಯ ಹೃದಯ ಸ್ಥಿತಿ ಹೇಗಿರಬೇಕು ?. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today