ತಾಯಿ ಚಿಕಿತ್ಸೆಗೆ ಕೂಡಿಟ್ಟಿದ್ದ ಹಣ ದರೋಡೆ ಮಾಡಿದ ಕಿರಾತಕರು

ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಬ್ಯಾಂಕ್ ಖಾತೆಗೆ ಹಣ ಹಾಕಲು ಹೋಗುತ್ತಿದ್ದ ವೇಳೆ ದರೋಡೆ

ಅಸ್ಸಾಂನಲ್ಲಿರುವ ಈತನ ತಾಯಿ ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು, ಚಿಕಿತ್ಸೆ ಪಡೆಯುತ್ತಿದ್ದರು. ಅವರ ವೈದ್ಯಕೀಯ ಚಿಕಿತ್ಸೆಗೆ ಹಲವು ತಿಂಗಳಿಂದ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟಿದ್ದ 27 ಸಾವಿರ ರೂಗಳನ್ನು ತಾಯಿಯ ಅಕೌಂಟ್ ಗೆ ಹಾಕಲು ಹೋಗುತ್ತಿದ್ದಾಗ ಕಿಡಿಗೇಡಿಗಳು ದರೋಡೆ ಮಾಡಿದ್ದಾರೆ.

( Kannada News Today ) : ಬೆಂಗಳೂರು : ತಾಯಿ ಚಿಕಿತ್ಸೆಗೆ ಕೂಡಿಟ್ಟಿದ್ದ ಹಣ ದರೋಡೆ ಮಾಡಿದ ಕಿರಾತಕರು : ಆಸ್ಪತ್ರೆ ಸೇರಿದ್ದ ತಾಯಿಗಾಗಿ ಹಣ ಹಾಕಲು ಹೊರಟಿದ್ದವನಿಗೆ ಚಾಕು ತೋರಿಸಿ ದರೋಡೆ ಮಾಡಿತುವ ಘಟನೆ ನಡೆದಿದೆ.

ಅನಾರೋಗ್ಯ ಕಾರಣದಿಂದ ಆಸ್ಪತ್ರೆ ಸೇರಿದ್ದ ತಾಯಿಯ ವೈದ್ಯಕೀಯ ಚಿಕಿತ್ಸಗೆ ಅವರ ಬ್ಯಾಂಕ್ ಖಾತೆಗೆ ಹಣ ಹಾಕಲು ಹೋಗುತ್ತಿದ್ದ ಯುವಕನನ್ನ ದರೋಡೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಕೋಲ್ಸ್ ಪಾರ್ಕ್ ಬಳಿ ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ಅಸ್ಸಾಂ ಮೂಲದ “ಪತ್ರಾಸ್ ಗುರಿಯಾ” ಎಂಬಾತನೇ ಹಣ ಕಳೆದುಕೊಂಡ ದುರ್ದೈವಿ.

ಇದನ್ನೂ ಓದಿ : ಗವಿಪುರಂ ಗುಟ್ಟಹಳ್ಳಿ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಗೋಡೆ ಕುಸಿತ

ಅಸ್ಸಾಂನಲ್ಲಿರುವ ಈತನ ತಾಯಿ ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು, ಚಿಕಿತ್ಸೆ ಪಡೆಯುತ್ತಿದ್ದರು. ಅವರ ವೈದ್ಯಕೀಯ ಚಿಕಿತ್ಸೆಗೆ ಹಲವು ತಿಂಗಳಿಂದ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟಿದ್ದ 27 ಸಾವಿರ ರೂಗಳನ್ನು ತಾಯಿಯ ಅಕೌಂಟ್ ಗೆ ಹಾಕಲು ಹೋಗುತ್ತಿದ್ದಾಗ ಕಿಡಿಗೇಡಿಗಳು ದರೋಡೆ ಮಾಡಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಳಿಗಾಗಿ Crime News in Kannada ಕ್ಲಿಕ್ಕಿಸಿ.

ಭಾರತಿ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅ.17 ರಂದು ಈ ಘಟನೆ ನಡೆದಿದ್ದು. ಪತ್ರಾಸ್ ಗುರಿಯಾ ಗೆ ಪ್ರೇಜರ್ ಟೌನ್ ನ ಐಟಿಸಿ ಬಳಿ ಚಾಕು ತೋರಿಸಿ 27 ಸಾವಿರ ರೂ. ಹಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ : ಕೋಲಾರದಲ್ಲಿ ಗೋಡೆ ಕುಸಿದು ಬಾಲಕ ಸಾವು

ಘಟನೆಯ ಸಂಬಂಧ ಯುವಕ, ಭಾರತಿ ನಗರ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಷಯ ಹೇಳಿ ದೂರು ನೀಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.

Scroll Down To More News Today