ರೌಡಿ ಶೀಟರ್ ಮಾರ್ಕೆಟ್ ಗಿರಿ ಭೀಕರ ಹತ್ಯೆ

Rowdy Sheeter Market Giri murdered

ರೌಡಿ ಶೀಟರ್ ಮಾರ್ಕೆಟ್ ಗಿರಿ ಭೀಕರ ಹತ್ಯೆ

ಮಾಜಿ ರೌಡಿ ಶೀಟರ್ ಮಾರ್ಕೆಟ್ ಗಿರಿಯನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಶಿವಮೊಗ್ಗ : ಹಳೇ ಚಾಳಿ ಬಿಟ್ಟು ಬದುಕು ಕಟ್ಟಿಕೊಂಡರೆ ಸಾಕಪ್ಪ ಎಂದು ಇದ್ದ ಮಾಜಿ ರೌಡಿ ಶೀಟರ್ ಮಾರ್ಕೆಟ್ ಗಿರಿ ಯ ಹತ್ಯೆ ನಡೆದಿದೆ. ಹಳೆಯ ಜಿದ್ದಿನಿಂದಾಗಿ ಕೊಲೆ ನಡೆದಿರಬಹುದು ಎನ್ನಲಾಗಿದೆ.

ದುಷ್ಕರ್ಮಿಗಳು ಬೀಸಿದ ಮಾರಕಾಸ್ತ್ರಗಳ ಏಟಿಗೆ ಶಿವಮೊಗ್ಗ ನಗರದ ದುರ್ಗಿಗುಡಿ ಬಳಿ ಗಿರಿ (45)  ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಗಿರಿ ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ದುರ್ಗಿಗುಡಿ ರಸ್ತೆಯಲ್ಲಿನ ಸೂರ್ಯ ಕಂಫರ್ಟ್‌ ಹೊಟೇಲ್‌ ಸಮೀಪ ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಗಿರಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರೆ.
ಕಾರಿನಲ್ಲಿಯೇ ಇದ್ದ ಗಿರಿ ಸಹಚರರು ತಪ್ಪಿಸಿಕೊಂಡಿದ್ದಾರೆ. ಇನ್ನು ತಿಂಗಳ ಕಾಲ ಜೈಲಿನಲ್ಲಿದ್ದ ಗಿರಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದನು. ////

WebTitle : ರೌಡಿ ಶೀಟರ್ ಮಾರ್ಕೆಟ್ ಗಿರಿ ಭೀಕರ ಹತ್ಯೆ – Rowdy Sheeter Market Giri murdered

ಈ ವಿಭಾಗದ ಇನ್ನಷ್ಟು ಕನ್ನಡ ನ್ಯೂಸ್ ಗಾಗಿ ಕ್ಲಿಕ್ಕಿಸಿ  – Kannada News

Kannada Crime News | Karnataka Crime News