Welcome To Kannada News Today

ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಬರೆದಿದ್ದ ಯುವತಿ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಲೈಂಗಿಕ ದೌರ್ಜನ್ಯ

ಉತ್ತರ ಪ್ರದೇಶದ ಮಥುರಾದ 21 ವರ್ಷದ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ ಹರ್ಯಾಣದ ಪಲ್ವಾಲ್‌ನ ತಜ್ವೀರ್ ಎಂಬ ಯುವಕನ ಪರಿಚಯವಾಗಿತ್ತು. ಇಬ್ಬರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದರು.

ಮಥುರಾ :  ಉತ್ತರ ಪ್ರದೇಶದ ಮಥುರಾದ 21 ವರ್ಷದ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ ಹರ್ಯಾಣದ ಪಲ್ವಾಲ್‌ನ ತಜ್ವೀರ್ ಎಂಬ ಯುವಕನ ಪರಿಚಯವಾಗಿತ್ತು. ಇಬ್ಬರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದರು. ಮತ್ತು ನಂತರ ಆತ್ಮೀಯ ಸ್ನೇಹಿತರಾದರು. ಆತ ತುಂಬಾ ಒಳ್ಳೆಯವನೆಂದು ನಂಬಿದ್ದಳು ಯುವತಿ…

ಈ ವೇಳೆ, ಆಗ್ರಾದಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಲಿಖಿತ ಪರೀಕ್ಷೆ ನಡೆಯಿತು. ಇದಕ್ಕಾಗಿಯೇ ಆಗ್ರಾಕ್ಕೆ ಹೋಗುವುದಾಗಿ ಯುವಕನಿಗೆ ಆಕೆ ಹೇಳಿದ್ದಾಳೆ. ನಿಮ್ಮ ಊರಿನಿಂದ ಬಸ್ಸಿನಲ್ಲಿ ಬರಬೇಡಿ, ನಾನು ಕಾರು ತರುತ್ತೇನೆ. ಒಟ್ಟಿಗೆ ಹೋಗಬಹುದು ಎಂದು ತಾಜ್ವೀರ್ ಹೇಳಿದ್ದಾನೆ.

ಆಕೆ ಒಪ್ಪಿಕೊಂಡಳು. ವರದಿ ಪ್ರಕಾರ ಯುವಕ ಯುವತಿಯ ಮನೆಗೆ ಕಾರಿನಲ್ಲಿ ಬಂದಿದ್ದಾನೆ. ಕಾರು ಚಾಲಕ ಚಾಲನೆ ಮಾಡುತ್ತಿದ್ದ. ಆತನ ಮೇಲೆ ಮೇಲೆ ಭರವಸೆ ಇಟ್ಟು ಆಕೆ ಕಾರು ಹತ್ತಿದ್ದಾಳೆ. ಆಗ್ರಾದಲ್ಲಿ ಪರೀಕ್ಷೆ ಬರೆದು ವಾಪಸ್ ಬರುವಾಗ ತಮಾಷೆ ಮಾಡುತ್ತಿದ್ದ ತಾಜ್ವೀರ್, ಬಳಿಕ ಡ್ರಗ್ಸ್ ಸೇವಿಸಲು ಆರಂಭಿಸಿದ್ದ. ಸ್ವಲ್ಪ ಸಮಯದ ನಂತರ, ಚಲಿಸುತ್ತಿದ್ದ ಕಾರಿನಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ನಂತರ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಕೋಸಿಕಲಾ ಎಂಬಲ್ಲಿ ಕಾರನ್ನು ನಿಲ್ಲಿಸಿಯುವತಿಯನ್ನು ಇಳಿಸಿ ಪರಾರಿಯಾಗಿದ್ದಾನೆ. ಅಲ್ಲಿಂದ ಮನೆಗೆ ಬಂದ ಯುವತಿ ಪರಿಸ್ಥಿತಿ ಹೇಳಿಕೊಂಡು ಅಳಲು ತೋಡಿಕೊಂಡಳು. ನಂತರ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಕುಟುಂಬಸ್ಥರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಜ್ವೀರ್‌ನನ್ನು ಬಂಧಿಸಿದ್ದಾರೆ.