ಕುಡಿದ ಅಮಲಿನಲ್ಲಿ ಜಾರಿಬಿದ್ದ ರೌಡಿಶೀಟರ್ ನವುಲೆ ಸಿದ್ದ ಸಾವು !

ಸ್ನೇಹಿತ ಜೊತೆನ ಮನೆಯ ಮೇಲೆ ಕುಡಿಯುತ್ತಿದ್ದ ರೌಡಿಶೀಟರ್ ನವುಲೆ ಸಿದ್ದ ಕೆಳಗೆ ಇಳಿಯುವ ವೇಳೆ ಮೆಟ್ಟಿಲಿಂದ ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಜಾರಿಬಿದ್ದ ರೌಡಿಶೀಟರ್ ನವುಲೆ ಸಿದ್ದ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದೆ.

ಶಿವಮೊಗ್ಗ : ಕೊರೋನ ಹಿನ್ನಲೆಯಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ವೇಳೆ ಎಲ್ಲಾ ರೀತಿಯ ಅಪರಾಧ ಪ್ರಕರಣಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಮದ್ಯ ಮಾರಾಟದ ನಂತರ ಒಂದೊಂದಾಗಿಯೇ ಆ ಪ್ರಕರಣಗಳು ಗರಿ ಬಿಚ್ಚಿಕೊಳ್ಳುತ್ತಿವೆ.

ಕೊರೋನ ಒಂದೆಡೆ ಒಳ್ಳೆಯದನ್ನ ಮಾಡಿತ್ತು ಎಂಬ ಮಾತು ಈಗ ಕೇಳಿಬರುತ್ತಿವೆ. ಎಲ್ಲಾ ರಂಗಗಳ ಚಟುವಟಿಕೆಯ ಮೇಲೆ ಲಾಕ್ ಡೌನ್ ಸಡಿಲಗೊಳಿಸಿದ ಪರಿಣಾಮ ಅನಾಹುತಗಳ ಪಟ್ಟಿಗಳೇ ಉದ್ದವಾಗ ತೊಡಗಿವೆ. ಹಾಗಂತ ಒಬ್ಬ ರೌಡಿ ಹೋದರೆ ಹೋಗಲಿ ಇವರೇಕೆ ಈ ರೌಡಿಯ ಕುರಿತು ಅಷ್ಟೊಂದು ತಲೆಕೆಡಿಸಿಕೊಂಡು ಬರೆಯುತ್ತಿದ್ದಾರೆ ಎಂದು ಶಾಪ ಹಾಕ್ತಿದ್ದೀರ?

ಕನ್ಸರ್ನ್ ಇರೋದು ರೌಡಿ ಮೇಲೆ ಅಲ್ಲ ಜೀವದ ಮೇಲೆ. ರೌಡಿ ಒಬ್ಬ ಉದಾಹರಣೆ ಅಷ್ಟೆ! ಭಾರತೀ ಕಾಲೋನಿ, ಕೆಇಬಿ ವೃತ್ತದ ಬಳಿ ಹೊಡೆದಾಟ ಎಲ್ಲವೂ ಸಹ ಗರಿಬಿಚ್ಚಿಕೊಂಡಿರುವು ಎಣ್ಣೆಯ ಹೊಡೆತಕ್ಕೆ! ಈಗ ರೌಡಿ ಶೀಟರ್ ನವುಲೆ ಸಿದ್ದನ ಕಥೆ!

ಕುಡಿದ ಅಮಲಿನಲ್ಲಿ ಜಾರಿಬಿದ್ದ ರೌಡಿಶೀಟರ್ ನವುಲೆ ಸಿದ್ದ ಸಾವು ! - Kannada News

ಮೇ.6 ರಂದು ಅಚ್ಚುತರಾವ್  ಬಡಾವಣೆಯಲ್ಲಿ ಸ್ನೇಹಿತ ಜೊತೆನ ಮನೆಯ ಮೇಲೆ ಕುಡಿಯುತ್ತಿದ್ದ ನವುಲೆ ಸಿದ್ದ  ಕೆಳಗೆ ಇಳಿಯುವ ವೇಳೆ ಮೆಟ್ಟಿಲಿಂದ ಜಾರಿ ಕೆಳಗೆ ಬೀಳುತ್ತಾನೆ. ರೌಡಿಶೀಟರ್ ಸಿದ್ದ ಅಲಿಯಾಸ್ ನವುಲೆ ಸಿದ್ದನಿಗೆ ಬಲವಾಗಿ ತಲೆಗೆ ಹೊಡೆತ ಬೀಳುತ್ತದೆ.

ಆತನನ್ನ ತಕ್ಷಣವೇ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಸಂಜೆ ಸಾವುಕಂಡಿದ್ದಾನೆ. 28 ವರ್ಷದ ಯುವಕ ವಿನೋಬ ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ ಮರ್ಡರ್, ಆಫ್ ಮರ್ಡರ್ ಹಾಗೂ ಅಕ್ರಮ ಗಾಂಜಾ ಮಾರಾಟದ ಹಿನ್ನಲೆಯಲ್ಲಿ  ಠಾಣೆಗಳಿಗೆ ವಾಂಟೆಡ್ ಪರ್ಸನ್ ಆಗಿದ್ದ.

ಈ ಹಿಂದೆನೂ ತಲೆಗೆ ಹೊಡೆತ ಬಿದ್ದು ಹೊಲಿಗೆ ಹಾಕಿಸಿಕೊಂಡಿದ್ದ ಸಿದ್ದನಿಗೆ ಮೇ.6 ರಂದು ಮೆಟ್ಟಿಲಿನಿಂದ ಇಳಿಯುವಾಗ ಅದೇ ಜಾಗಕ್ಕೆ ಹೊಡೆತ ಬಿದ್ದಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನವುಲೆ ಸಿದ್ದ ಸಾವುಕಂಡಿದ್ದಾನೆ ಎನ್ನಲಾಗಿದೆ. ಪ್ರಕರಣ ಜಯನಗರ ಠಾಣೆಯಲ್ಲಿ ದಾಖಲಾಗಿದೆ.

Web Title : Shimoga Rowdy sheeter navule sidda died

Follow us On

FaceBook Google News

Read More News Today