Welcome To Kannada News Today

ಶಿವಮೊಗ್ಗದಲ್ಲಿ ಮಗುವನ್ನು ಉಸಿರುಗಟ್ಟಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

shivamogga mother commits suicide after killing her child

🌐 Kannada News :

ತನ್ನ 14 ತಿಂಗಳ ಮಗವನ್ನು ಸ್ವತಃ ಸಾಯಿಸಿದ 23ರ ಹರೆಯದ ತಾಯಿ, ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿ, ಶಿವಮೊಗ್ಗ ಜನತೆ ಬೆಚ್ಚಿಬಿದ್ದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಬೆವಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಈ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ತನ್ನ 14 ತಿಂಗಳ ಗಂಡು ಮಗುವನ್ನು ಉಸಿರುಗಟ್ಟಿಸಿದ ತಾಯಿ, ಮಗು ಸತ್ತಿರುವುದನ್ನು ಖಾತ್ರಿ ಪಡಿಸಿಕೊಂಡು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ತಾಯಿಯನ್ನು ಆಶಿಕಾ(23), ಮೃತ ಮಗುವನ್ನು ಅಥರ್ವ ಎಂದು ಗುರುತಿಸಲಾಗಿದೆ. ಈ ಘಟನೆಯಿಂದ ಕುಟುಂಬದವರು, ಗ್ರಾಮಸ್ಥರು ದಿ️ಗ್ಭ್ರಾಂತರಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮಗು ಅಥರ್ವನಿಗೆ ಕಿಡ್ನಿ ತೊಂದರೆ ಇತ್ತು, ಶಸ್ತ್ರಚಿಕಿತ್ಸೆ ಆಗಬೇಕು ಎಂದು ವೈದ್ಯರು ಸಲಹೆ ನೀಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ..
ಈ ಬಗ್ಗೆ ತಾಯಿ ಅತಿಯಾದ ಜಿಗುಪ್ಸೆ ಹದ್ದಿದ್ದಳು ಎನ್ನಲಾಗಿದೆ, ಶಸ್ತ್ರಚಿಕಿತ್ಸೆಯ ನಂತರ ತನ್ನ ಮಗು ಉಳಿಯುತ್ತದೆಯೋ ಇಲ್ಲವೋ ಎಂಬ ಚಿಂತೆ ತಾಯಿಗೆ ಕಾಡಲಾರಂಭಿಸಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಮಾಸಿಕವಾಗಿ ನೊಂದ ತಾಯಿ ಮಗುವನ್ನು ಕೊಂಡು ತಾನು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile