Welcome To Kannada News Today

shocking case, ಅವಳಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ತಂದೆ, ಚಿಕ್ಕಪ್ಪನಿಂದಲೇ ನೀಚ ಕೃತ್ಯ

shocking case, twin sister assault by their father and maternal uncle

🌐 Kannada News :

[ Kannada News Today ] : Crime News

ಹೈದರಾಬಾದ್ :  ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಮತ್ತು ಆಕೆಯ ಪೋಲಿಯೊ ಪೀಡಿತ ಸಹೋದರಿಯ ಮೇಲೆ ಅವರ ತಂದೆ ಮತ್ತು ಚಿಕ್ಕಪ್ಪ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರೂ ಬಾಲಕಿಯರು ಅವಳಿಗಳಾಗಿದ್ದು ತಂದೆ ಮತ್ತು ಚಿಕ್ಕಪ್ಪನ ಕೃತ್ಯದಿಂದ ಜಿಗುಪ್ಸೆಗೊಳಗಾಗಿದ್ದಾರೆ.

ನೀಚ ಚಿಕ್ಕಪ್ಪ ಸುಮಾರು ಮೂರು ವರ್ಷಗಳಿಂದ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರೆ, ತಂದೆ ಒಂದು ತಿಂಗಳ ಹಿಂದೆ ಲೈಂಗಿಕ ದೌರ್ಜನ್ಯ ಪ್ರಾರಂಭಿಸಿದ್ದಾನೆ. ಪೊಲೀಸರು ಇಬ್ಬರು ನಿಚರನ್ನೂ ಶನಿವಾರ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಪೋಲಿಯೊ ಪೀಡಿತ ಬಾಲಕಿ ವಾರಂಗಲ್‌ನ ಇಂಟೆಜರ್ ಗುಂಜ್‌ನಲ್ಲಿರುವ ಸರ್ಕಾರಿ ಪ್ರೌಡ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾಳೆ, ಮತೊಬ್ಬ ಬಾಲಕಿ ತನ್ನ ಎಸ್‌ಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾಳೆ.

ಅವಳಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ತಂದೆ, ಚಿಕ್ಕಪ್ಪನಿಂದಲೇ ನೀಚ ಕೃತ್ಯ - crime news in kannada
ಅವಳಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ತಂದೆ, ಚಿಕ್ಕಪ್ಪನಿಂದಲೇ ನೀಚ ಕೃತ್ಯ

ಶುಕ್ರವಾರ, ಎಸ್‌ಎಸ್‌ಸಿ ವಿದ್ಯಾರ್ಥಿನಿ ಶಾಲೆಯಲ್ಲಿದ್ದಾಗ, ಆಕೆಯ ಶಿಕ್ಷಕರೊಬ್ಬರು ಅವಳು ಚಿಂತೆ ಮಾಡುತ್ತಿರುವುದನ್ನು ಗಮನಿಸಿ, ವಿಚಾರಿಸಿದಾಗ, ಹುಡುಗಿ ಪ್ರಸ್ತುತ ವಿಷಯವನ್ನು ತಿಳಿಸಿದ್ದಾಳೆ. ಹೆಚ್ಚಿನ ಸಮಾಲೋಚನೆಯಲ್ಲಿ, ಹುಡುಗಿ ತನ್ನ ಮತ್ತು ಅವಳ ಸಹೋದರಿಯ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಾಳೆ.

ಶಿಕ್ಷಕ ಅದನ್ನು ಅಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಅತ್ಯಾಚಾರ, ಬೆದರಿಕೆ ಮತ್ತು ಪೊಕ್ಸೊ ಕಾಯ್ದೆಯ ಆರೋಪದಡಿ ಇಂಟೆಜಾರ್‌ಗುಂಜ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ.

ವಿಚಾರಣೆಯಲ್ಲಿ, ಅವರ ಚಿಕ್ಕಪ್ಪ ಮೊದಲು ಎಸ್‌ಎಸ್‌ಸಿ ವಿದ್ಯಾರ್ಥಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ವಿಷಯ ಬಹಿರಂಗ ಪಡಿಸಿದರೆ, ಆಕೆಯ ಮತ್ತು ಆಕೆಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ.

ನಂತರ, ಅವನು ಅವಳ ಸಹೋದರಿಯನ್ನು ಸಹ ಇದೆ ಕೃತ್ಯಕ್ಕೆ ಬಳಸಿಕೊಂಡು ಆಕೆಗೂ ಲೈಂಗಿಕ ಕಿರುಕುಳ ನೀಡಿದ್ದಾನೆ. ಆದರೆ ಬಾಲಕಿಯರಿಬ್ಬರೂ ಜೀವಭಯದಿಂದ ಭಯದಿಂದ ಸುಮ್ಮನಿದ್ದರು. ಆದರೆ ಮೂರು ತಿಂಗಳ ಹಿಂದೆ ಅವರ ತಂದೆ ಕೂಡ ಲೈಂಗಿಕ ದೌರ್ಜನ್ಯ ಆರಂಭಿಸಿದ್ದಾನೆ.

ಈ ಇಬ್ಬರು ನೀಚರು ದೈನಂದಿನ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. ಹುಡುಗಿಯರ ತಾಯಿ ದೈನಂದಿನ ವೇತನದಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಅವರು ಕೆಲಸಕ್ಕೆ ಹೋದಾಗ ಅದೇ ಸಮಯದ ಲಾಭವನ್ನು ಪಡೆದು, ಬಾಲಕಿಯರಿಗೆ ಲೈಂಗಿಕವಾಗಿ ಹಿಂಸೆ ನೀಡುತ್ತಿದ್ದರು..

Web Title : shocking case, twin sister assault by their father and maternal uncle
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube ಅನುಸರಿಸಿ. 


📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile