ಕುಟುಂಬದೆಲ್ಲರನ್ನೂ ಕೊಂದು, ತಾನು ಗುಂಡು ಹಾರಿಸಿಕೊಂಡ

Shootout, Man killed himself and his family at Gundlupet

ಕುಟುಂಬದೆಲ್ಲರನ್ನೂ ಕೊಂದು, ತಾನು ಗುಂಡು ಹಾರಿಸಿಕೊಂಡ – Shootout, Man killed himself and his family at Gundlupet

ಕುಟುಂಬದೆಲ್ಲರನ್ನೂ ಕೊಂದು, ತಾನು ಗುಂಡು ಹಾರಿಸಿಕೊಂಡ

ಕನ್ನಡ ನ್ಯೂಸ್ ಟುಡೇ – ಬೆಂಗಳೂರು: ಮೈಸೂರಿನ ವ್ಯಕ್ತಿಯೊಬ್ಬ ತನ್ನ ಕುಟುಂಬ ಸದಸ್ಯರನ್ನು ಕೊಂದು ನಂತರ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ನಡೆದಿದೆ. ಈ ದುರಂತ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ಹೊರಹೊಲಯದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರ್ಥಿಕ ಸಮಸ್ಯೆಗಳೇ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಆದರೆ, ಘಟನೆ ನಡೆದ ಸ್ಥಳದಲ್ಲಿ ಯಾವುದೇ ಆತ್ಮಹತ್ಯಾ ಟಿಪ್ಪಣಿ ಇಲ್ಲವಾದ್ದರಿಂದ, ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಓಂ ಪ್ರಕಾಶ್ ಭಟ್ಟಾಚಾರ್ಯ (38) ಮೈಸೂರು ಮೂಲದ ಉದ್ಯಮಿ. ವ್ಯವಹಾರದಲ್ಲಿನ ಆರ್ಥಿಕ ಸಮಸ್ಯೆಗಳಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿರಬಹುದು ಎಂಬ ಅನುಮಾನಗಳು ಮೂಡಿವೆ. ತಾನು ಸತ್ತರೆ ಕುಟುಂಬವು ಒಂಟಿಯಾಗುತ್ತದೆ ಎಂದು ಭಾವಿಸಿ, ಅವರನ್ನು ಕೊಲ್ಲುವ ಮೂಲಕ ಸಾಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಓಂ ಪ್ರಕಾಶ್ ಅವರು ಗುರುವಾರ ತಮ್ಮ ಕುಟುಂಬವನ್ನು ಮೈಸೂರು ಬಳಿಯ ಗುಂಡ್ಲುಪೇಟೆಯಲ್ಲಿರುವ ತಮ್ಮ ಸ್ನೇಹಿತರ ತೋಟದ ಮನೆಗೆ ಕರೆದೊಯ್ದರು. ನಂತರ ತೋಟದ ಮನೆಯಿಂದ ಲಾಡ್ಜ್ ಗೆ ಬಂದು ತಂಗಿದ್ದರು, ಅವರ ತಂದೆ ನಾಗರಾಜ ಭಟ್ಟಾಚಾರ್ಯ (65), ತಾಯಿ ಹೇಮಾ (60), ಪತ್ನಿ ನಿಕಿತಾ (30) ಮತ್ತು ಮಗ ಆರ್ಯಕೃಷ್ಣ (4) ರನ್ನು ತನ್ನ ಬಂದೂಕಿನಿಂದ ಗುಂಡು ಹಾರಿಸಿಕೊಂದಿದ್ದಾರೆ. ನಂತರ ತಾನೂ ಅದೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಮೃತ ಪಟ್ಟಿದ್ದಾರೆ.

ಪ್ರಕರಣ ಧಾಳಿಸಿರುವ ಪೊಲೀಸರು ಆತ್ಮಹತ್ಯೆಯ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಸಿದ್ದಾರೆ, ಈ ಬಗ್ಗೆ ಚಾಮರಾಜನಗರ ಎಸ್‌ಪಿ ಎಚ್‌ಡಿ ಆನಂದ್ ಕುಮಾರ್ ತಿಳಿಸಿದ್ದಾರೆ.////

Web Title :  Shootout, Man killed himself and his family at Gundlupet