Welcome To Kannada News Today

crime news: ಪೊಲೀಸರಿಂದಲೇ ಬಟ್ಟೆ ಅಂಗಡಿ ಕಳ್ಳತನ, ಸಿಸಿಟಿವಿಯಲ್ಲಿ ಸೆರೆ

crime news: ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿದ ಕಾನ್‌ಸ್ಟೇಬಲ್ ಮತ್ತು ಎಸ್ ಐ ಕಳ್ಳತನ ದೃಶ್ಯ ಎಸ್ಪಿ ಕೈ ಸೇರಿದ ಬಳಿಕ ಅಮಾನತುಗೊಳಿಸಿದ್ದಾರೆ

🌐 Kannada News :

SI and Constable Committed Theft: ಚಿತ್ತೂರು: ಕಳ್ಳತನವನ್ನು ತಡೆಯಬೇಕಾದ ಪೊಲೀಸರೇ ಕಳ್ಳತನ ಮಾಡಿದರೆ? ಬೆರಗಾದ್ರ, ಹೌದು ಈ ಸುದ್ದಿ ಅದೇ ನಿದರ್ಶನ. ಎಸ್ಸೈ ಮೊಹಮ್ಮದ್ ಮತ್ತು ಕಾನ್ಸ್ಟೇಬಲ್ ಇಂತಿಯಾಜ್ ಎಂಬ ಪೊಲೀಸರು ಚಿತ್ತೂರಿನ ವೆಲ್ಲೂರು ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ.

ಇದೇನ್ ಕಾಲ ಬಂತಪ್ಪ, ಅಂತ ಅನಿಸೋದು ಸಹಜ, ಕಾರಣ ಇಂತಹ ಜನರಿಗೆ ಬುದ್ದಿ ಕಲಿಸಬೇಕಾದ ಪೊಲೀಸರೇ ಈ ಕೃತ್ಯ ಎಸಗಿದರೆ ಜನ ಸಾಮಾನ್ಯರ ಗತಿ ಏನು?

ಪೊಲೀಸರಿಂದಲೇ ಕಳ್ಳತನ
ಪೊಲೀಸರಿಂದಲೇ ಕಳ್ಳತನ

ಬಟ್ಟೆ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅವರ ಕಳ್ಳತನ ದೃಶ್ಯ ದಾಖಲಾಗಿದೆ. ನಂತರ ಬಟ್ಟೆ ಅಂಗಡಿಯ ವ್ಯಾಪಾರಿ ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಎಸ್ಪಿಗೆ ದೂರು ನೀಡಿದ್ದಾರೆ.

ವಿಚಾರಣೆ ನಡೆಸಿದ ಎಸ್ಪಿ ಸೆಂಥಿಲ್ ಕುಮಾರ್ ಎಸ್ಸೇ ಮತ್ತು ಕಾನ್ಸ್ಟೇಬಲ್ ಅನ್ನು ಅಮಾನತುಗೊಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.