ಕೊಲೆ ಪ್ರಕರಣ ಭೇದಿಸಲು ನೆರವಾಯ್ತು “ಚಪ್ಪಲಿ”

ಕೊಲೆ ಪ್ರಕರಣ ಭೇದಿಸಲು ನೆರವಾಗಿದ್ದು.. ಚಪ್ಪಲಿ... ಪೊಲೀಸರು ಚಪ್ಪಲಿ ಮೂಲಕ ಪ್ರಕರಣವನ್ನು ಭೇದಿಸಿ.. ಆರೋಪಿಗಳನ್ನು ಬಂಧಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಮುಂಬೈ: ಅಕ್ರಮ ಸಂಬಂಧ ವ್ಯಕ್ತಿಯೊಬ್ಬನ ಕೊಲೆಗೆ ಕಾರಣವಾಗಿದೆ. ಸುಮಾರು 15 ದಿನಗಳಿಂದ ಪ್ರಕರಣವನ್ನು ಭೇದಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಆದರೆ ಕೊಲೆ ಪ್ರಕರಣ ಭೇದಿಸಲು ನೆರವಾಗಿದ್ದು.. ಚಪ್ಪಲಿ… ಪೊಲೀಸರು ಚಪ್ಪಲಿ ಮೂಲಕ ಪ್ರಕರಣವನ್ನು ಭೇದಿಸಿ.. ಆರೋಪಿಗಳನ್ನು ಬಂಧಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಭಾವಧಾನ್ ಪ್ರದೇಶದ 27 ವರ್ಷದ ವ್ಯಕ್ತಿಯೊಬ್ಬರು ಅಕ್ಟೋಬರ್ 22, 2021 ರಿಂದ ನಾಪತ್ತೆಯಾಗಿದ್ದಾರೆ. ಆತನ ತಾಯಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಹರಣ ಸೇರಿದಂತೆ ವಿವಿಧ ಕೋನಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.

ತನಿಖೆ ನಡೆಸುತ್ತಿದ್ದಾಗ ನಾಪತ್ತೆಯಾಗಿರುವ ವ್ಯಕ್ತಿಯ ಚಪ್ಪಲಿ ಅದೇ ಗ್ರಾಮದ ವ್ಯಕ್ತಿಯೊಬ್ಬನ ಮನೆ ಮುಂದೆ ಕಂಡು ಬಂದಿದೆ. ಪೊಲೀಸರು ಮನೆಯಲ್ಲಿದ್ದ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಭಯಾನಕ ಸತ್ಯ ಹೊರಬಿದ್ದಿದೆ.

ಹೌದು, ತನಿಖೆ ವೇಳೆ ಪೊಲೀಸರಿಗೆ ಆಘಾತಕಾರಿ ವಿಷಯಗಳು ತಿಳಿದು ಬಂದಿವೆ. ಕಾಣೆಯಾದ ವ್ಯಕ್ತಿಯನ್ನು ಚಪ್ಪಲಿ ಸಿಕ್ಕ ಮನೆಯವನೇ ಕೊಂದಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆ ಮಾಡಲು ಕಾರಣ ಏನು ಎಂದು ಕೇಳಿದರೆ.. ಕೊಲೆಯಾದ ವ್ಯಕ್ತಿ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ .. ಅದಕ್ಕಾಗಿಯೇ ಆತನನ್ನು ಕೊಲೆ ಮಾಡಲಾಗಿದೆ ಎಂದು ಆತ ಬಾಯ್ಬಿಟ್ಟಿದ್ದಾನೆ . ಅಕ್ಟೋಬರ್ 21 ರಂದು ಮೃತನ ಮೊಬೈಲ್ ಸಂಖ್ಯೆಯಿಂದ ತನ್ನ ಪತ್ನಿಗೆ ಎರಡು ಮಿಸ್ಡ್ ಕಾಲ್ ಬಂದಿತ್ತು ಎಂದು ಆರೋಪಿ ತಿಳಿಸಿದ್ದಾನೆ.

ಅದೇ ದಿನ ರಾತ್ರಿ ಆತ ತನ್ನ ಮನೆಗೆ ಬಂದು ಪತ್ನಿಯನ್ನು ಭೇಟಿಯಾಗಿದ್ದನ್ನು ಆತ ಬಹಿರಂಗಪಡಿಸಿದ್ದಾನೆ. ಇವರಿಬ್ಬರ ಅಕ್ರಮ ಸಂಬಂಧ ತಿಳಿದ ಆರೋಪಿ ಇನ್ನೂ ಇಬ್ಬರ ಸಹಾಯದಿಂದ ಆತನನ್ನು ಕೊಂದಿದ್ದಾರೆ. ಚಾಕುವಿನಿಂದ ಇರಿದಿದ್ದಾರೆ. ನಂತರ ದೇಹವನ್ನು ಸುಟ್ಟು ಹಾಕಲಾಗಿದೆ.

ಈ ಮೂಲಕ ಪೊಲೀಸರು ಪುಣೆಯಲ್ಲಿ ಇನ್ನೂ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬನನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ.

Stay updated with us for all News in Kannada at Facebook | Twitter
Scroll Down To More News Today