SR Vishwanath, ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್ ! ಅಸಲಿಯತ್ತೇನು ?

SR Vishwanath : ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಹತ್ಯಗೆಗೆ ಸ್ಕೆಚ್ ಪ್ರಕರಣ, ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ

  • ಎಸ್‌ಆರ್ ವಿಶ್ವನಾಥ್ ಹತ್ಯೆಯ ಸ್ಕೆಚ್ ಆರೋಪಕ್ಕೆ ಗೋಪಾಲಕೃಷ್ಣ ಪ್ರತಿಕ್ರಿಯೆ
  • 80% video clip ನಕಲಿ
  • ನಾನು ಯಾರಿಗೂ ಕೊಲೆ ಮಾಡಿಲ್ಲ. ಸುಪಾರಿಗೂ ನನಗೂ ಯಾವುದೇ ಸಂಬಂಧವಿಲ್ಲ.
  • ಕುಳ್ಳ ದೇವರಾಜ್ ಮತ್ತು ಶಾಸಕ ವಿಶ್ವನಾಥ್ ಕಾಲ್ ಲಿಸ್ಟ್ ತೆಗೆಯಲಿ

ಬೆಂಗಳೂರು (Bengaluru) : ಬಿಜೆಪಿ ಶಾಸಕ ಎಸ್‌. ಆರ್‌ ವಿಶ್ವನಾಥ್ (BJP MLA SR Vishwanath) ಹತ್ಯೆಯ ಸ್ಕೆಚ್‌ನ ವಿಡಿಯೋ (Murder Sketch Video) ಇದೀಗ ಬಹಿರಂಗವಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಜತೆ (Gopal Krihshna) ಮಾತನಾಡಿರುವ ಹಲವು ಸಂಭಾಷಣೆಗಳು ವಿಡಿಯೋದಲ್ಲಿವೆ.

ಎಸ್‌. ಆರ್‌ ವಿಶ್ವನಾಥ್ ಯಲಹಂತ ಬಿಜೆಪಿ ಶಾಸಕ. ವಿಶ್ವನಾಥ್ ವಿರುದ್ಧ ಗೋಪಾಲಕೃಷ್ಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಇದೀಗ ಬಹಿರಂಗಗೊಂಡಿರುವ ವಿಡಿಯೋದಲ್ಲಿ ವಿಶ್ವನಾಥ್ ಹತ್ಯೆಯ ಸ್ಕೆಚ್ ಕುರಿತು ಮಾತುಕತೆ ನಡೆದಿದೆ, ಎನ್ನಲಾಗಿದೆ. ವಿಡಿಯೋದಲ್ಲಿ ಅಪರಿಚಿತ ಕೊಲೆಯ ಸ್ಕೆಚ್ ಬಗ್ಗೆ ಮಾತನಾಡುತ್ತಿರುವುದು ಕುಳ್ಳ ದೇವರಾಜ್ ಹೆಸರಿನ ವ್ಯಕ್ತಿ ಎಂದು ಹೇಳಲಾಗಿದೆ.

ಈ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ ಹತ್ಯೆ ಕುರಿತು ಕುಳ್ಳ ದೇವರಾಜ್ ಹೆಸರಿನ ವ್ಯಕ್ತಿ ಜತೆ ಮಾತುಕತೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಚರ್ಚಿಸುವ ವಿಡಿಯೋ ಸಿಸಿಬಿ ತಂಡಕ್ಕೆ ಸಿಕ್ಕಿದೆ. ಈ ವಿಡಿಯೋದಲ್ಲಿ ತಡರಾತ್ರಿವರೆಗೂ ಗೋಪಾಲಕೃಷ್ಣ ಅವರನ್ನು ಸಿಸಿಬಿ ವಿಚಾರಣೆ ನಡೆಸಿದೆ.

ತನಿಖೆಯ ಸಂದರ್ಭದಲ್ಲಿ, ಹೊಸ ವಿಚಾರ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದ ಯಲಹಂಕದ ವಿಶ್ವನಾಥ್ ಬೆಂಬಲಿಗ ದೇವರಾಜ್ ಅಲಿಯಾಸ್ ಕುಳ್ಳದೇವರಾಜ್ ನನ್ನು ಸಿಸಿಬಿ ವಶಕ್ಕೆ ಪಡೆದಿದೆ. ಪ್ರಕರಣದ ಮುಖ್ಯ ಆಧಾರವಾಗಿರುವ ವೀಡಿಯೊವನ್ನು ನೋಡಿ, ಇದು ಉದ್ದೇಶಪೂರ್ವಕ ವೀಡಿಯೊವಾಗಿದೆ. ವಿಡಿಯೋ ಮಾಡಿದವರ ಮೇಲೆ ಕ್ರಮಜರುಗಿಸಿ ಎಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್.ಆರ್.ವಿಶ್ವನಾಥ್ ಮತ್ತು ಗೋಪಾಲಕೃಷ್ಣ
ಎಸ್.ಆರ್.ವಿಶ್ವನಾಥ್ ಮತ್ತು ಗೋಪಾಲಕೃಷ್ಣ

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಇಂದು (ಡಿ.01) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ನಾನು ಯಾವುದೇ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿಲ್ಲ. ಕೋರ್ಟ್ ಅನುಮತಿ ಪಡೆದು ಕಟ್ಟಡ ನಿರ್ಮಿಸುತ್ತಿದ್ದೇನೆ. ವಿಡಿಯೋದಲ್ಲಿ ಇರುವುದು ಶೇ.80 ರಷ್ಟು ಭಾಗ ಫೇಕ್​ ಎಂದು ಹೇಳಿದರು.

ಕುಳ್ಳ ದೇವರಾಜ್ ವಿರುದ್ಧ ನಾನು ದೂರು ದಾಖಲಿಸುತ್ತೇನೆ. ಕುಳ್ಳ ದೇವರಾಜ್ ವಿರುದ್ಧ ಮಾನನಷ್ಟ ಕೇಸ್ ದಾಖಲಿಸುವೆ. ಜಮೀನು ವಿಚಾರಕ್ಕೆ 5 ಲಕ್ಷ ತಂದು 2 ಲಕ್ಷ ವಾಪಸ್ ಪಡೆದಿದ್ದ. ಯಲಹಂಕ ಕ್ಷೇತ್ರದಲ್ಲಿ ರೌಡಿಗಳ ಚಟುವಟಿಕೆ ಜಾಸ್ತಿ ಆಗಿದೆ. ನನಗೆ ಭದ್ರತೆ ನೀಡಲು ಗೃಹಸಚಿವರಿಗೆ ಮನವಿ ಮಾಡುವೆ. ನನಗೂ ಪೊಲೀಸ್ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಇದೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇದ್ದರೆ ಸಾಬೀತುಪಡಿಸಲಿ ಎಂದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಎಸ್.ಆರ್. ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ನಡೆಸಿ ಪ್ರತಿಕ್ರಿಯಿಸಿದ್ದು, ನಿನ್ನೆ (ಮಂಗಳವಾರ) ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು. ತಾವು ಮಾಡಿದ ತಪ್ಪಿಗೆ ಕ್ಷಮಿಸಿ ಎಂದು ಪತ್ರ ಬಂದಿತ್ತು. ನನ್ನ ಹತ್ಯೆಗೆ ಪ್ಲ್ಯಾನ್ (Murder Sketch) ಮಾಡಿದ್ದ ಬಗ್ಗೆ ಸ್ಕೆಚ್ ಹಾಕಿದ್ದರು. ಇದು ತಪ್ಪೆಂದು ತಿಳಿದು ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಕುಳ್ಳ ದೇವರಾಜ್ ನನಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಕೂಡಲೇ ನಾನು ಗೃಹ ಸಚಿವರಿಗೆ ಕರೆ ಮಾಡಿ ಮಾತಾಡಿದ್ದೆ ಎಂದರು.

Stay updated with us for all News in Kannada at Facebook | Twitter
Scroll Down To More News Today