Crime News: ಲವ್ ಮಾಡಲಿಲ್ಲ ಅಂತ ನಡು ರೋಡಲ್ಲೇ ಇರಿದ

ತನ್ನ ಪ್ರೀತಿಯನ್ನು ಅಂಗೀಕರಿಸಲಿಲ್ಲ ಎಂದು ಕೆರಳಿದ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯನ್ನು ನಡು ರೋಡಿನಲ್ಲೇ ಇರಿದಿದ್ದಾನೆ.

ಪುಣೆ: ನಡು ರೋಡಿನಲ್ಲೇ 14 ವರ್ಷದ ಬಾಲಕಿಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ ಪಾಗಲ್ ಪ್ರೇಮಿ. ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ನಡೆದ ಈ ದುಷ್ಕೃತ್ಯ ಸಂಚಲನ ಮೂಡಿಸಿದೆ.

8 ನೇ ತರಗತಿಯ ಹುಡುಗಿ ಸಂಜೆ ಪುಣೆ ಪಟ್ಟಣದ ಬಿಬೇವಾಡಿ ಪ್ರದೇಶದಲ್ಲಿ ಕಬಡ್ಡಿ ಅಭ್ಯಾಸಕ್ಕೆ ಹೋಗುತ್ತಿದ್ದಾಗ ಮೂವರು ಯುವಕರು ಬೈಕ್ ನಲ್ಲಿ ಬಂದು ತಡೆದರು.

ಅವರಲ್ಲಿ 22 ವರ್ಷದ ವ್ಯಕ್ತಿಯೊಬ್ಬ ಹುಡುಗಿಯ ದೂರದ ಸಂಬಂಧಿಯಾಗಿದ್ದ. ಮೂವರೂ ಸೇರಿ ಆ ಹುಡುಗಿಯನ್ನು ಹರಿತವಾದ ಆಯುಧದಿಂದ ಹಲವಾರು ಬಾರಿ ಇರಿದರು. ಬಾಲಕಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಸೋದರಸಂಬಂಧಿ, ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾದವರಿಗೆ ವ್ಯಾಪಕ ಶೋಧ ನಡೆದಿದೆ.

Stay updated with us for all News in Kannada at Facebook | Twitter
Scroll Down To More News Today