ದಲಿತರ ಮದುವೆ ಮೆರವಣಿಗೆ.. ಕಲ್ಲು ತೂರಾಟ: 10 ಮಂದಿ ಬಂಧನ

ದಲಿತ ಕುಟುಂಬವೊಂದು ಆಯೋಜಿಸಿದ್ದ ಮದುವೆ ಮೆರವಣಿಗೆಯ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದಾರೆ. 

ಜೈಪುರ: ದಲಿತ ಕುಟುಂಬವೊಂದು ಆಯೋಜಿಸಿದ್ದ ಮದುವೆ ಮೆರವಣಿಗೆಯ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದಾರೆ.

ಗುರುವಾರ ರಾತ್ರಿ ವರನ ಮೆರವಣಿಗೆ ವೇಳೆ.. ಕಲ್ಲು ತೂರಾಟ ನಡೆದಿದೆ. ಕುದುರೆಯ ಮೇಲೆ ವಧು ಮನೆಗೆ ಹೋಗುವಾಗ ಅದ್ಧೂರಿ ಮೆರವಣಿಗೆ ನಡೆಯಿತು. ಜೈಪುರದ ಕೊಟ್‌ಪುಟ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೆರವಣಿಗೆ ವೇಳೆ ಪೊಲೀಸರು ಕಾವಲು ಕಾಯ್ದುಕೊಂಡಿದ್ದರು. ಸುಮಾರು 15 ನಿಮಿಷಗಳ ಕಾಲ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆಯಂತೆ.

ಪೊಲೀಸರ ಪ್ರಕಾರ, ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಜೈಪುರ ಜಿಲ್ಲೆಯ ಪಾವ್ಟಾದ ಕೈರೋಡಿ ಗ್ರಾಮದಲ್ಲಿ ದಲಿತ ವರನ ಮದುವೆಯ ಮೆರವಣಿಗೆಯು ವಧುವಿನ ಮನೆಗೆ ತಲುಪುವಾಗ ಈ ಘಟನೆ ನಡೆದಿದೆ.

ರಕ್ಷಣೆಗೆ ನಿಯೋಜನೆಗೊಂಡಿದ್ದ ಪೊಲೀಸರು ಇದ್ದರೂ ಕಲ್ಲು ತೂರಾಟ ನಡೆದಿದೆ ಎಂದು ವಧುವಿನ ಕುಟುಂಬಸ್ಥರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ರಾಜಕಾರಣಿಗಳು ಗುರುವಾರ ಬೆಳಿಗ್ಗೆ ಅವರನ್ನು ಭೇಟಿ ಮಾಡಿದ್ದಾರೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ಸಂಬಂಧ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today