ಶಿವಮೊಗ್ಗ : ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

student found dead in the hostel storeroom in Shimoga - Crime News

ಕನ್ನಡ ನ್ಯೂಸ್ ಟುಡೇ

ಶಿವಮೊಗ್ಗ : ಸೋಮವಾರ ನಗರದ ಖಾಸಗಿ ಶಾಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ಕಂಡಿದೆ. ಮೂಲತಃ ಶಿಕಾರಿಪುರದ ಕಾವ್ಯಾ (15) ನಗರದ ಮೇರಿ ಇಮ್ಯಾಕ್ಯುಲೇಟ್ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಅದೇ ಶಾಲೆಯ ಹಾಸ್ಟೆಲ್‌ನಲ್ಲಿದ್ದರು.

ಕಾವ್ಯಾ ಸೋಮವಾರ ಹಾಸ್ಟೆಲ್ ಸ್ಟೋರ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಗಮನಿಸಿದ ಶಾಲಾ ಸಿಬ್ಬಂದಿ ಉಳಿದ ವಿದ್ಯಾರ್ಥಿಗಳನ್ನು ತಮ್ಮ ಮನೆಗಳಿಗೆ ಕಳುಹಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಶಾಲೆಗೆ ಬಂದ ಪೊಲೀಸರು ಸ್ಥಳವನ್ನು ಪರಿಶೀಲಿಸಿದರು. ಕಾವ್ಯ ಆತ್ಮಹತ್ಯೆ ಬಗ್ಗೆ ಪೋಷಕರು ಅನುಮಾನ ಶಂಕಿಸಿದ್ದಾರೆ.

ಶಿವಮೊಗ್ಗ : ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ - Kannada News

ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ಎಂದು ಪೋಷಕರು ಹೇಳಿದರೆ, ಈ ಹಿಂದೆ ಕನ್ನಡದಲ್ಲಿ ಪರೀಕ್ಷೆಗಳ ಫಲಿತಾಂಶ ಕಡಿಮೆ ಇದ್ದುದರಿಂದ ಶಿಕ್ಷಕರು ಮತ್ತು ಪೋಷಕರು ಅವಳನ್ನು ಪ್ರಶ್ನಿಸಿದ್ದಕ್ಕೆ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸಧ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.////

Quick Links : Kannada Crime News | Karnataka Crime News


 

Follow us On

FaceBook Google News