ಸುಳ್ವಾಡಿ ವಿಷ ಪ್ರಸಾದ ಪ್ರಕರಣ : ಅರೋಪಿಗಳ ಪರ ವಕೀಲರೇ ಇಲ್ಲ

Sulwadi Maramma Temple Poisoning Case, advocates did not appear before the Court

ಸುಳ್ವಾಡಿ ವಿಷ ಪ್ರಸಾದ ಪ್ರಕರಣ : ಅರೋಪಿಗಳ ಪರ ವಕೀಲರೇ ಇಲ್ಲ

ಹನೂರು ತಾಲೂಕು ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ವಿಷ ಪ್ರಸಾದದ ಅರೋಪದ ಮೇರೆಗೆ ನಾಲ್ವರು ಆರೋಪಿಗಳು ಮೈಸೂರು ಕಾರಗೃಹದಲ್ಲಿ ಮುದ್ದೆ ಮುರಿಯುತ್ತಿದ್ದಾರೆ.

ಅಧಿಕಾರದ ಅಮಲಿಗೆ ಬಿದ್ದ ನೀಚ ತಂಡ ಪ್ರಸಾದದ ನೆಪ ಹೇಳಿ ಅಮಾಯಕರ ಜೀವ ಬಲಿ ಪಡೆದಿತ್ತು, ವಿಶೇಷ ವೆಂದರೆಆರೋಪಿಗಳಲ್ಲಿಒಬ್ಬ ಹೆಣ್ಣು ಸಹ ಸಾವಿನ ರೂವಾರಿ ಎಂಬುವುದು.

ಮಾರಮ್ಮ ದೇವಸ್ಹಾನದ ಪ್ರಸಾದಕ್ಕೆ ವಿಷ ಹಾಕಿ 17 ಜನ ಅಮಾಯಕರನ್ನು ಬಲಿ ಪಡೆದು ನೂರಕ್ಕು ಹೆಚ್ಟು ಜನರು ಅಸ್ವಸ್ತರಾಗಲು ಕಾರಣರಾದ ನಂಬರ್ 1 ಅರೋಪಿ ಮಹಾದೇವಸ್ವಾಮಿಯನ್ನು ಒಳಗೂಂಡ ನಾಲ್ವರು ಅರೋಪಿಗಳ ಈ ಪ್ರಕರಣದ ವಿಚಾರಣೆ ಮಂಗಳವಾರ ನಗರದ ಸೆಷ್ಸನ್ ನ್ಯಾಯಲದ ನ್ಯಾಯದೀಶರು ವೀಡಿಯೋ ಕಾನ್ಪರೆನ್ಸ್ ಮುಂಖಾತರ ಮೈಸೂರು ಕಾರಾಗೃಹ ದಲ್ಲಿರುವ ಅರೋಪಿಗಳ ವಿಚಾರಣೆ ನಡೆಸಿದರು.

ಸುಳ್ವಾಡಿ ವಿಷ ಪ್ರಸಾದ ಪ್ರಕರಣ : ಅರೋಪಿಗಳ ಪರ ವಕೀಲರೇ ಇಲ್ಲ - Kannada News

ವಿಚಾರಣೆ ವೇಳೆ ಅರೋಪಿಗಳ ಪರ ವಕೀಲರು ಹಾಜರಿಲ್ಲದ ಕಾರಣ ವಿಚಾರಣೆಯನ್ನು ಮಾಚ೯ 21ಕ್ಕೆ ಮುಂದೂಡಲಾಯಿತು. ಸಧ್ಯ ಅದಾಗಲೇ ಈ ಪ್ರಕರಣಕ್ಕೆ ಸಂಬದಪಟ್ಟ ಅರೋಪಿಗಳ ಪರ ವಕೀಲರು ಸಲ್ಲಿಸಿದ್ದ ಜಾಮಿನು ಅಜಿ೯ ತಿರಿಸೃತಗೂಂಡಿತ್ತು.

ಇವರು ಮಾಡಿರುವ ನೀಚ ಕೃತ್ಯ ರಾಷ್ಟ್ರವನ್ನೇ ಬೆಚ್ಚಿ ಬಿಳಿಸಿತ್ತು, ಇಂತಹ ಪಾಪಕೃತ್ಯಕ್ಕೆ ಯಾವ ವಕೀಲರು ಆರೋಪಿಗಳ ಪರ ನಿಲ್ಲಲು ತಯಾರಿಲ್ಲವಾದರು. ಆರೋಪಿಗಳ ಪರ ಜಾಮೀನು ಅಜಿ೯ ಸಲ್ಲಿಸುವವರೇ ಇಲ್ಲವಾದರು.

ಸಧ್ಯ ವಕೀಲರ ಈ ನಡೆ ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ. ಈ ರಾಜ್ಯದ ಜನತೆಯಿಂದ ವಕೀಲ ವೃಂದಕೆ ಪ್ರಶಂಸೆ ವ್ಯಾಕ್ತವಾಗಿದೆ. ಸಾವನ್ನಪ್ಪಿದ ಕುಂಟುಬಸ್ಥರು ಹಾಗು ಅಸ್ವಸ್ತರಾದವರು ಆರೋಪಿಗಳಿಗೆ ತಕ್ಕ ಶಿಕ್ಷೆ ಯಾಗಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.///ವರದಿ ಸಿದ್ದರಾಜು ಹನೂರು


News Title : Sulwadi Maramma Temple Poisoning Case, advocates did not appear before the Court
(ಕನ್ನಡ ಸುದ್ದಿಗಳು from kannadanews.today , No. 1 News Portal for Kannadigas)
Kannada News : Stay Updated with itsKannada to Know more Latest Kannada News Today.


Follow us On

FaceBook Google News

Read More News Today