Crime News, ತಾಯಿ ಪ್ರಿಯಕರನಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ತಾಯಿ, ಪ್ರಿಯಕರ ಬಂಧನ

Tamilnadu Crime News, ತಮಿಳುನಾಡಿನ ಚೆನ್ನೈನ ಅಂಬತ್ತೂರಿನಲ್ಲಿ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಾಯಿ ಮತ್ತು ಆಕೆಯ ವಿವಾಹೇತರ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. 

🌐 Kannada News :

ಚೆನ್ನೈ (Kannada News) : ತಮಿಳುನಾಡಿನ ಚೆನ್ನೈನ ಅಂಬತ್ತೂರಿನಲ್ಲಿ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಾಯಿ ಮತ್ತು ಆಕೆಯ ವಿವಾಹೇತರ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಕೊರಟ್ಟೂರು ರೈಲ್ವೆ ಸ್ಟೇಷನ್ ರಸ್ತೆಯ ಪ್ರಿಯಾಂಕಾ (37) ಮೂರು ವರ್ಷಗಳ ಹಿಂದೆ ಪತಿ ನರೇಶ್ ಕುಮಾರ್ ಜತೆಗಿನ ಸಂಬಂಧ ಕಡಿದುಕೊಂಡಿದ್ದರು. ಆನಂತರ ಅಂಥೂರು ತಿರುವೆಂಕಟನಗರದ ಸಂದೀಪ್ ಎಂಬುವವರೊಂದಿಗೆ ಎರಡು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದರು. ಆಕೆಗೆ ಹದಿನೈದು ವರ್ಷದ ಮಗಳು ಸಹ ಇದ್ದಾಳೆ.

ಅಲ್ಲಿಯ ತನಕ ಎಲ್ಲವೂ ಸರಿಯಾಗೇ ಇತ್ತು, ಈ ದುಷ್ಟ ಪ್ರಿಯಕರನ ಕಣ್ಣು ಆ ಬಾಲಕಿ ಮೇಲೆ ಬಿದ್ದಿತ್ತು.

ಶುಕ್ರವಾರ ರಾತ್ರಿ ಪ್ರಿಯಾಂಕಾ ಅವರ ಪುತ್ರಿ (15) ಮೇಲೆ ಸಂದೀಪ್ (ಪ್ರಿಯಾಂಕಾ ಪ್ರಿಯಕರ) ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದಕ್ಕೆ ಪ್ರಿಯಾಂಕಾ ಸಹ ಪ್ರೋತ್ಸಾಹಿಸಿದ್ದಾಳೆ ಎನ್ನಲಾಗಿದೆ.

ಘಟನೆಯ ಕುರಿತು ಜಿಲ್ಲಾ ಬಾಲಕಿಯರ ಸುರಕ್ಷತಾ ಅಧಿಕಾರಿ ಜೇಮ್ಸ್ ಕುಮಾರ್ ಅವರಿಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಅಂಬತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ಸ್ ಪೆಕ್ಟರ್ ಜ್ಯೋತಿಲಕ್ಷ್ಮಿ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today