Home Work: ಹೋಂವರ್ಕ್ ಮಾಡಲಿಲ್ಲ ಅಂತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ

Home Work: ಇಲ್ಲೊಬ್ಬ ಶಿಕ್ಷಕ ತನ್ನ ಹದಿಮೂರು ವರ್ಷದ ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾನೆ. ಹೊಂ ವರ್ಕ್ ಮಾಡಲಿಲ್ಲ ಅಂತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.

Home Work: ಶಿಕ್ಷಕರಿಗೆ ತಾಳ್ಮೆ ಬೇಕು, ಅದರಲ್ಲೂ ಮಕ್ಕಳನ್ನು ಪ್ರೀತಿಯಿಂದ ನೋಡುವ ಗುಣ ಶಿಕ್ಷಕರದ್ದು. ಮಕ್ಕಳು ಮನೆಗಿಂತ ಹೆಚ್ಚಿನ ಸಮಯ ಶಾಲೆಯಲ್ಲೇ ಕಳೆಯುತ್ತಾರೆ, ಅಂತಹುದರಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನ ತಮ್ಮೆಡೆ ಸೆಳೆದುಕೊಳ್ಳುವ ಗುಣ ತಾನಾಗೇ ಬರಬೇಕು.

ಇಲ್ಲೊಬ್ಬ ಶಿಕ್ಷಕ ತನ್ನ ಹದಿಮೂರು ವರ್ಷದ ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾನೆ. ಹೊಂ ವರ್ಕ್ ಮಾಡಲಿಲ್ಲ ಅಂತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸಲಸಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲಾಸಾರ್ ಗ್ರಾಮದಲ್ಲಿ ಏಳನೇ ತರಗತಿ ವಿದ್ಯಾರ್ಥಿಯು ಹೋಂವರ್ಕ್ ಮಾಡದೆ ಬುಧವಾರ ಶಾಲೆಗೆ ಹೋಗಿದ್ದಾನೆ. ಇದಕ್ಕೆ ಕೆರಳಿದ ಶಿಕ್ಷಕ ವಿದ್ಯಾರ್ಥಿಯನ್ನು ತಳಿಸಿದ್ದಾನೆ ಎಂದು ಅವರು ಆರೋಪಿಸಲಾಗಿದೆ.

ಮೂಗಿನಿಂದ ರಕ್ತ ಬರುವವರೆಗೂ ಶಿಕ್ಷಕ ವಿದ್ಯಾರ್ಥಿಯನ್ನು ನೆಲಕ್ಕೆ ಉರುಳಿಸಿ ತಳಿಸಿದ್ದಾನೆ. ಅದರೊಂದಿಗೆ ವಿದ್ಯಾರ್ಥಿ ಸ್ಥಳದಲ್ಲೇ ಮೂರ್ಛೆ ಹೋಗಿದ್ದಾನೆ. ಕೆಲ ಸಮಯ ಪ್ರಜ್ಞೆ ಬಾರದ ಹಿನ್ನೆಲೆ ಶಿಕ್ಷಕರು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತಂದೆಯ ದೂರಿನಂತೆ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ.

ಮೃತ ವಿದ್ಯಾರ್ಥಿಯ ಹೆಸರು ಗಣೇಶ್. ಆತನ ತಲೆ, ಕಣ್ಣು ಮತ್ತು ಬಾಯಿಯಲ್ಲಿ ಗಾಯಗಳಾಗಿವೆ ಎಂದು ತಂದೆ ಹೇಳಿದರು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಪೊಲೀಸರು ಶಿಕ್ಷಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.