ಅಥಣಿ; ಕೃಷ್ಣಾ ನದಿಯಲ್ಲಿ ಕಾಲು ಜಾರಿ ಬಿದ್ದ ಯುವಕನ ಶವ ಪತ್ತೆ

ಕೃಷ್ಣಾನದಿಯಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ ಯುವಕನ ಶವ ಪತ್ತೆ

ಅಥಣಿ (Athani); ಮೂರು ದಿನಗಳ ನಂತರ ಕೃಷ್ಣಾ ನದಿಯಲ್ಲಿ ಯುವಕನ ಶವ ಪತ್ತೆಯಾಗಿದೆ, ಯುವಕ ಶ್ರಾವಣ ಮಾಸದ ಕೊನೆಯ ಶುಕ್ರವಾರ ಪೂಜೆಯ ನಿಮಿತ್ಯ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ದೇವರಿಗೆ ನೀರು ತರಲು ಆಗಮಿಸಿದ ವೇಳೆ ಕೃಷ್ಣಾನದಿಯಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ.

ಭಾಗಲಕೋಟೆ ಜಿಲ್ಲೆಯ ರಬಕವಿ -ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮದ ಕೃಷ್ಣ ನದಿ ದಂಡೆಯಲ್ಲಿ ಅಥಣಿ ಪಟ್ಟಣದ ಕಾಗಜಿ ಗಲ್ಲಿಯ ನಿವಾಸಿ ಸಾಗರ ರಾಜು ಹೊನಕಟ್ಟಿ (23) ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ : ಸಹಾಯ ಮಾಡಿ, ಕೈ ಮುಗಿದು ಬೇಡಿದ ದುನಿಯಾ ವಿಜಯ್

The body of a young man who slipped in Krishna river was found

ಇದನ್ನೂ ಓದಿ : ಅಥಣಿ ಹೊರವಲಯದಲ್ಲಿ ಭೀಕರ ಅಪಘಾತ, ಇಬ್ಬರು ಸಾವು

ಮೂರು ದಿನಗಳ ಪರ್ಯಂತ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ದಳ ಮತ್ತು ಬೆಳಗಾವಿಯ SDRF ತಂಡ ಗಳು ಕಾರ್ಯ ನಿರ್ವಹಸಿದ ಫಲವಾಗಿ ಇವತ್ತು ಮುಂಜಾನೆ ಸುಮಾರು 9 ಗಂಟೆಗೆ ಶವ ಪತ್ತೆಯಾಗಿದೆ. ಅಥಣಿಯ ಅಗ್ನಿಶಾಮಕ ದಳ ಹಾಗೂ ಬೆಳಗಾವಿಯ SDRF ತಂಡಗಳ ಕಾರ್ಯಕ್ಕೆ ಜನ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ..

ಇದನ್ನೂ ಓದಿ : ಅಥಣಿಯಲ್ಲಿ ಮತ್ತೊಂದು ಭೀಕರ ಅಪಘಾತ, ವ್ಯಕ್ತಿ ಸಾವು!

The body of a young man who slipped in Krishna river was found

ವರದಿ – ಬಸವರಾಜ.ಎಸ್.ಖೇಮಲಾಪುರ್