ಗೋಣಿ ಚೀಲದಲ್ಲಿ ತೇಲುತ್ತಿದ್ದ ಶವ, ಕೊಲೆ ಮಾಡಿ ಎಸೆದಿರುವ ಶಂಕೆ

The Dead Body found in the lake, likely murdered

ನರಗುಂದ : ಪಟ್ಟಣದಿಂದ ಸಂಕದಾಳಕ್ಕೆ ತೆರಳುವ ರಸ್ತೆಯಲ್ಲಿ ವಸಂತ ಅವರ ಜಮೀನಿನಲ್ಲಿ ಆಳವಾದ ನೀರಿನಲ್ಲಿ ಶವವೊಂದು ಭಾನುವಾರ ಮಧ್ಯಾಹ್ನ ೩ ಗಂಟೆಗೆ ಪತ್ತೆಯಾಗಿದೆ.
ಗೋಣಿ ಚೀಲದಲ್ಲಿ ಶವವನ್ನು ಕಟ್ಟಿ ಒಗೆದಿರುವುದನ್ನು ನೋಡಿದರೆ ಕೊಲೆ ಮಾಡಿ ಎಸೆದಿರುವ ಸಂಭವವಿದೆ. ನೀರಿನ ಮೇಲೆ ಶವವಿದ್ದ ಗೋಣಿಚೀಲ ತೇಲಾಡುತ್ತಿದ್ದುದನ್ನು ನೋಡಿದರೆ ಶುಕ್ರವಾರ ಅಥವಾ ಶನಿವಾರವೇ ಎಸೆದಿರುವ ಶಂಕೆ ಮೂಡಿದೆ.
ನೋಡಿದ ಜನರು ಪೊಲೀಸರಿಗೆ ತಿಳಿಸಿದ್ದಾರೆ.

ಎಸ್ಪಿ ಯತೀಶ್, ಡಿವೈಎಸ್‌ಪಿ ಶಿವಾನಂದ್ ಕಟಗಿ ಹಾಗೂ ಸಿಪಿಐ ಡಿ.ಬಿ ಪಾಟೀಲ ಸ್ಥಳಕ್ಕೆ ತೆರಳಿ ಶವವನ್ನು ಮಹಜ ರಿಗೆ ಕಳಿಸಿದ್ದಾರೆ.
ಮೃತ ವ್ಯಕ್ತಿಯು ನರಗುಂದ ಪಟ್ಟಣದ ಜನತಾ ಕಾಲೊನಿಯ ಗದಿಗೆಪ್ಪ ಯಲ್ಲಪ್ಪ ಸಣ್ಣವಡಿ (೩೫) ಎಂದು ತಿಳಿದು ಬಂದಿದೆ. ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಣಿ ಚೀಲದಲ್ಲಿ ತೇಲುತ್ತಿದ್ದ ಶವ, ಕೊಲೆ ಮಾಡಿ ಎಸೆದಿರುವ ಶಂಕೆ - Kannada News

Follow us On

FaceBook Google News

Read More News Today