ಡ್ಯಾಗರ್ ನಿಂದ ಇರಿದು ವ್ಯಕ್ತಿಯ ಕೊಲೆ, ಬೆಂಗಳೂರಿನಲ್ಲಿ ಘಟನೆ

The murder of a person stabbed by dagger, incident in Bangalore

ಡ್ಯಾಗರ್ ನಿಂದ ಇರಿದು ವ್ಯಕ್ತಿಯ ಕೊಲೆ, ಬೆಂಗಳೂರಿನಲ್ಲಿ ಘಟನೆ

ಬೆಂಗಳೂರು : ಬೆಂಗಳೂರಿನ ಕೆ.ಆರ್.ಸರ್ಕಲ್ ಬಳಿ ಡ್ಯಾಗರ್ ನಿಂದ ಇರಿದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ, ತಡ ರಾತ್ರಿ ಈ ಒಂದು ಘಟನೆ ನಡಿದಿದ್ದು, ಅಪರಿಚಿತ ವ್ಯಕ್ತಿಯನ್ನು ಇರಿದು ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ, ಸಧ್ಯ ಈ ಬಗ್ಗೆ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾದ ವ್ಯಕ್ತಿ ಯಾರು, ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ, ಕೊಲೆಗಾರರು ಯಾರು ಎಂಬುದು ಪೋಲೀಸರ ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ.

ಡ್ಯಾಗರ್ ನಿಂದ ಇರಿದು ವ್ಯಕ್ತಿಯ ಕೊಲೆ, ಬೆಂಗಳೂರಿನಲ್ಲಿ ಘಟನೆ - Kannada News

ಇನ್ನು ಮೇಲ್ನೋಟಕ್ಕೆ ಇದು ಮಧ್ಯದ ನಶೆಯಲ್ಲಿ ನಡೆದಿರಬಹುದಾದ ಕೊಲೆ ಎಂದು ಶಂಕಿಸಲಾಗಿದೆ, ಈ ಬಗ್ಗೆ ತನಿಖೆ ಚುರುಗೊಳಿಸಿರುವ ಪೊಲೀಸರು ಕೊಲೆಗಾರರ ಸುಳಿವು ಪತ್ತೆ ಹಚ್ಚುವಲ್ಲಿ ನಿರತವಾಗಿದೆ

ಇನ್ನು ಕೊಲೆ ನಡೆದ ಸ್ಥಳದಲ್ಲಿ ರಕ್ತದ ಕೋಡಿಯೇ ಹರಿದಿದ್ದು, ಕೊಲೆಯ ಭೀಕರತೆಯನ್ನು ಹೇಳುತ್ತದೆ.////

Web Title : The murder of a person stabbed by dagger, incident in Bangalore
(Get Kannada news Live alerts @ kannadanews.today)

Follow us On

FaceBook Google News

Read More News Today