Crime News, ಬೆತ್ತಲಾಗಿದ್ದ ಪ್ರೇಮಿಗಳನ್ನು ನೋಡಿದ ಮಹಿಳೆ ಬರ್ಬರ ಹತ್ಯೆ

Story Highlights

ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ಸಂಚಲನ ಮೂಡಿಸಿದೆ. ರಾಜಸ್ಥಾನದ ರಾಜ್‌ಮಂಡ್ ನಗರದ ಸಮೀಪದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ಸಂಚಲನ ಮೂಡಿಸಿದೆ. ರಾಜಸ್ಥಾನದ ರಾಜ್‌ಮಂಡ್ ನಗರದ ಸಮೀಪದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜೀವರಾಮ್ (50) ತನ್ನ ಪತ್ನಿ ಕಂಕುಬಾಯಿ (45) ಜಮೀನಿಗೆ ಊಟ ತೆಗೆದುಕೊಂಡು ಬರುತ್ತಾಳೆ ಎಂದು ಕಾಯುತ್ತಿದ್ದರು. ಕಾದು ಕಾದು ಸುಸ್ತಾದ ಪತಿ ಮನೆಗೆ ಬಂದು ಮಕ್ಕಳನ್ನು ವಿಚಾರಿಸಿದಾಗ ಆಗಲೇ ತೋಟಕ್ಕೆ ಹೋಗಿರುವುದಾಗಿ ತಿಳಿಸಿದ್ದಾರೆ.

ಪತಿ ತನ್ನ ಹೆಂಡತಿಯ ಬಗ್ಗೆ ಹಳ್ಳಿಯವರೆಲ್ಲರನ್ನು ವಿಚಾರಿಸಿದ್ದಾನೆ… ಆತ ಸೇರಿದಂತೆ ಗ್ರಾಮಸ್ಥರು ಊರಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ.. ಆದರೆ ಪತ್ನಿಯ ಸುಳಿವವು ಸಿಗುವುದೇ ಇಲ್ಲ. ಕೊನೆಗೆ ಅವರು ಪೊಲೀಸರಿಗೆ ದೂರು ನೀಡಿದರು.

ಸ್ಥಳಕ್ಕೆ ಬಂದ ಪೊಲೀಸರು ನಾನಾ ಆಯಾಮಗಳಲ್ಲಿ ತನಿಖೆ ಶುರುಮಾಡಿದಾಗ.. ಬೆಳಗಿನ ಜಾವ ಸಮೀಪದ ಅರಣ್ಯ ಪ್ರದೇಶದಲ್ಲಿ ಕಂಕುಬಾಯಿ ಶವ ಪತ್ತೆಯಾಗಿದೆ. ಆದರೆ ಆಕೆಯ ಶವಕ್ಕೆ ಕಾಲುಗಳಿರಲಿಲ್ಲ. ಕಾಡಿನಲ್ಲಿ ಕಾಲುಗಳು ಇಲ್ಲದ ಶವವನ್ನು ಕಂಡು ಕೆಲ ಗ್ರಾಮಸ್ಥರು ಇದೊಂದು ಪ್ರಾಣಿಯ ಕೃತ್ಯ ಎಂದು ಭಾವಿಸಿದರು. ಇನ್ನೂ ಕೆಲವರು ಇದು ದರೋಡೆಕೋರರ ಕೃತ್ಯ ಎಂದರು.. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದರು.

ಈ ನಡುವೆ ಕೊಲೆಯಾದ ದಿನ ಜಮೀನಿನಲ್ಲಿ ಯುವಕನೊಬ್ಬನನ್ನು ಕೆಲವು ಗ್ರಾಮಸ್ಥರು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ… ಪಕ್ಕದ ಗ್ರಾಮದಲ್ಲಿ ವಾಸವಿದ್ದ ಗೋಪಿ ಎಂಬುವವನೇ ಆ ಯುವಕ ಎಂದು ತಿಳಿದು ಬಂದಿದೆ.

ತಮ್ಮ ಶೈಲಿಯಲ್ಲೇ ಗೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಕಂಕುಬಾಯಿ ಸಾವನ್ನಪ್ಪಿದ ದಿನ ಜಮೀನಿನಲ್ಲಿ ತನ್ನ ಗೆಳತಿಯೊಂದಿಗೆ ಇದ್ದೆ ಎಂದು ಗೋಪಿ ಹೇಳಿದ್ದಾನೆ. ಆತ ತನ್ನ ಪ್ರೇಯಸಿ ಜೊತೆ ಸಂಭೋಗಿಸುತ್ತಿದ್ದುದನ್ನು ಆಕೆ ನೋಡಿದಳು, ಆಕೆ ಆ ವಿಷಯವನ್ನು ಹೊರಗೆ ಹೇಳುವ ಮೊದಲು ಅವಳನ್ನು ಕೊಲ್ಲಬೇಕಾಯಿತು ಎಂದು ಸತ್ಯ ಬಿಚ್ಚಿಟ್ಟಿದ್ದಾನೆ.

ಹಾಗಾದರೆ ಆಕೆಯ ಕಾಲುಗಳನ್ನು ಏಕೆ ಕತ್ತರಿಸಿದೆ ? ಎಂದು ಪೊಲೀಸರು ವಿಚಾರಣೆ ನಡೆಸಿದಾಗ, ಆಕೆಯ ಕಾಲುಗಳಲ್ಲಿ ಇದ್ದ ದೊಡ್ಡ ದೊಡ್ಡ ಗೆಜ್ಜೆಗಳನ್ನು ತೆಗೆದುಕೊಳ್ಳುವ ಸಲುವಾಗಿ ಆಕೆಯ ಕಾಲುಗಳನ್ನು ಕತ್ತರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಾಗೂ ಇದು ದರೋಡೆಕೋರರು ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದಾರಿತಪ್ಪಿಸಲು ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.

Related Stories