Welcome To Kannada News Today

ಸಿಆರ್‌ಪಿಎಫ್‌ ಯೋಧ ಸಚಿನ್ ಬಂಧನ ಪ್ರಕರಣ : ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅಮಾನತು

The sub-inspector Anil Kumar in charge of Sadalaga police station was Suspended

🌐 Kannada News :

ಸಿಆರ್‌ಪಿಎಫ್‌ ಯೋಧ ಸಚಿನ್ ಬಂಧನ ಪ್ರಕರಣ : ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅಮಾನತು

Headlines

  • ಸಿಆರ್‌ಪಿಎಫ್‌ ಯೋಧ ಸಚಿನ್ ಬಂಧನ ಪ್ರಕರಣ.
  • ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅಮಾನತು.
  • ಸದಗಲಾ ಠಾಣೆಯ ಪಿಎಸ್ಐ ಅನೀಲ ಕಂಬಾರ್ ಅಮಾನತು.
  • ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಆದೇಶ

ಬೆಳಗಾವಿ :  ರಾಜ್ಯವಾಪಿ ಸುದ್ದಿ ಮಾಡಿದ್ದ ಸಿ ಆರ್ ಪಿ ಎಫ್ ಯೋಧನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಘಟನೆಗೆ ಕಾರಣೀಕರ್ತ ಎಂಬ ಆರೋಪ ಆಡಿಯಲ್ಲಿ ಸದಗಲಾ ಠಾಣೆಯ ಪಿಎಸ್ಐ ಅನೀಲ ಕುಮಾರ್ ಅವರನ್ನು ಬುಧವಾರ ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಹೌದು, ಸಿಆರ್‌ಪಿಎಫ್‌ ಯೋಧ ಸಚಿನ್ ಸಾವಂತ್ ವಿರುದ್ಧ ಕೇಸ್ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

ಯೋಧನ ಪ್ರಕರಣವನ್ನು ಸರಿಯಾಗಿ ನಿಭಾಯಿಸಲಿಲ್ಲ. ಇನ್ನು ತನಿಖೆ ವೇಳೆ ಕರ್ತವ್ಯಲೋಪ ಕಂಡು ಬಂದಿದ್ದು ಪಿಎಸ್ಐ ಅನಿಲ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದ್ದಾರೆ.

ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ್ ಮಾಸ್ಕ್ ಧರಿಸಿರಲಿಲ್ಲ ಎಂಬ ಕಾರಣ ಆಗಿದ್ದ ಗೊಂದಲದ ಪ್ರಕರಣ ಇದೀಗ ಇನ್ನಷ್ಟು ತೀವ್ರ ಪಡೆದುಕೊಂಡಿದೆ. ಠಾಣಾ ಸಿಬ್ಬಂದಿ ಯೋಧನನ್ನು ಕರೆ ತಂದು ರಾತ್ರಿ ಊಟ ನೀಡದೆ ಹಾಗೂ ಚಡಿ ಏಟು ಕೊಟ್ಟು, ಹಿಂಸಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಯೋಧನ ಮೈಮೇಲೆ ಆದ ಗಾಯಗಳ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತಿದ್ದವು, ಸಧ್ಯ ಆ ಫೋಟೋಗಳು ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದ್ದವು.

ಈ ಪ್ರಕರಣ ಸಂಬಂಧ ಯೋಧ ಸಚಿನ್ ಸಾವಂತ್ ಅವರ ಪ್ರಾಥಮಿಕ ಹೇಳಿಕೆಯನ್ನು ಪಡೆಯಲಾಗಿದ್ದು ತನಿಖೆ ಮುಂದುವರೆಯುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪೇದೆಗಳ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಐಜಿಪಿ ತಿಳಿಸಿದ್ದಾರೆ.

ಸದಲಗಾ ಸಬ್‌ಇನ್ಸ್‌ಪೆಕ್ಟರ್ ಅಮಾನತು

ಯೋಧನ ಮೈಮೇಲೆ ಬಾಸುಂಡೆ ಏಳುವಂತೆ ಹೊಡೆದಿರುವ ಫೋಟೋಗಳು ವೈರಲ್ ಆಗಿವೆ. ಈ ಪ್ರಕರಣದ ತನಿಖೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಆದೇಶಿಸಿದ್ದರು. ಬೆಳಗಾವಿ ಐಜಿಯಿಂದ ತನಿಖೆಗೆ ಆದೇಶಿಸಲಾಗಿದೆ.

ತನಿಖೆ ಮುಂದುವರಿದಿದ್ದು, ಪಿಎಸ್ಐ ಅನಿಲ ಕಂಬಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಈ ನಡುವೆ ಖ್ಯಾತ ವಾಗ್ಮಿ ಪತ್ರಕರ್ತ ಚಕ್ರವರ್ತಿ ಸೂಲಿಬೆಲೆ ಅವರು ಯೋಧನ ಮೇಲೆ ನಡೆದ ಪೊಲೀಸರ ದೌರ್ಜನ್ಯ ಖಂಡಿಸಿದ್ದು, ಈ ಪ್ರಕರಣ ಸಂಬಂಧ ಗೃಹಮಂತ್ರಿ ರಾಜೀನಾಮೆ ಪಡೆದು, ಎಸ್ಪಿಯನ್ನು ಸಸ್ಪೆಂಡ್ ಮಾಡಿ ಎಂದು ಮುಖ್ಯಮಂತ್ರಿಗೆ ಟ್ವಿಟ್ ಮಾಡಿದ್ದಾರೆ.

ಸಿಆರ್‌ಪಿಎಫ್‌ ಯೋಧ ಸಚಿನ್ ಬಂಧನ ಪ್ರಕರಣದ ವಿವರ 

ಏಪ್ರಿಲ್ 23ರಂದು ಮನೆ ಮುಂದೆ ಬೈಕ್ ತೊಳೆಯುತ್ತಿದ್ದ ಯೋಧ ಸಚಿನ್ ಸಾವಂತ್ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಪ್ರಶ್ನಿಸಿದ್ದರು. ಈ ವೇಳೆ ಮಾತಿನ ಚಕಮಿಕಿ ನಡೆದು ನಂತರ ಪೊಲೀಸರು ಹಲ್ಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಯೋಧ ಸಹ ಹೊಡೆದಿದ್ದರು. ಈ ಸಂಬಂಧ ಬೆಳಗಾವಿ ಪೊಲೀಸರು ಸಚಿನ್ ರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು.

Web Title : The sub-inspector Anil Kumar in charge of Sadalaga police station was Suspended

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile