Welcome To Kannada News Today

ನಿನ್ನೆ ಫೂಲ್ ಆದರು, ಇವತ್ತು ಫೂಲ್ ಮಾಡಿದರು ! ಮದ್ಯದ ಅಂಗಡಿಗೆ ಕನ್ನ

Theft in the liquor store, just took out low-priced liquor

🌐 Kannada News :

ಗದಗ : ಬುಧವಾರ ಏಪ್ರಿಲ್ ಒಂದರಂದು ಎಂಎಸ್‌ಐಎಲ್ ಮದ್ಯದ ಅಂಗಡಿ ಓಪನ್ ಎಂಬ ಸುಳ್ ಸುದ್ದಿ ನಂಬಿ ಹಲವು ಮದ್ಯವ್ಯಸನಿಗಳು ಕ್ಯೂ ನಿಂತು ಫೂಲ್ ಆಗಿದ್ದರು.

ಬುಧವಾರ ರಾತ್ರಿ ಕಳೆದು ಗುರುವಾರ ಬೆಳಿಗ್ಗೆ ಆಗುವ ಹೊತ್ತಿಗೆ ಕೆಲವು ಮದ್ಯವ್ಯಸನಿಗಳು ಈ ‘ವ್ಯವಸ್ಥೆ’ಯನ್ನು ಫೂಲ್ ಮಾಡಿದರೆ ?

ಬುಧವಾರ-ಗುರುವಾರದ ಮಧ್ಯರಾತ್ರಿ ಇಲ್ಲೊಂದು ಎಂಎಸ್‌ಐಎಲ್ ಮದ್ಯದ ಅಂಗಡಿಗೆ ಕನ್ನ ಹಾಕಿ, ಒಂದಿಷ್ಟು ಮದ್ಯದ ಬಾಟಲ್/ಪ್ಯಾಕೆಟ್‌ಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.

ಗದಗ ನಗರಕ್ಕೆ ಹತ್ತಿಕೊಂಡೇ ಇರುವ ತಾಲೂಕಿನ ಕಳಸಾಪೂರ ಗ್ರಾಮದಿಂದ ಆಚೆಗೆ ಸ್ವಲ್ಪ ದೂರದಲ್ಲಿರುವ ಎಂ.ಎಸ್. ಪಾಟೀಲ್ ಎಂಬುವವರಿಗೆ ಸೇರಿದ ಎಂಎಸ್‌ಐಎಲ್ ಮದ್ಯದ ಅಂಗಡಿಯ ಶಟರ್ ಕೀಲಿ ಮುರಿದು ಮದ್ಯದ ಬಾಟಲುಗಳನ್ನು ಕದಿಯಲಾಗಿದೆ.

ವಿಚಿತ್ರವೆಂದರೆ, ೧.೫೦ ಲಕ್ಷ ರೂ. ಮೌಲ್ಯದ ದುಬಾರಿ ಮದ್ಯವನ್ನು ಮುಟ್ಟಿಯೇ ಇಲ್ಲ. ಕಡಿಮೆ ಮೌಲ್ಯದ ಮದ್ಯವನ್ನಷ್ಟೇ ಒಯ್ದಿದ್ದಾರೆ. ಹೀಗಾಗಿ, ಇವರು ವೃತ್ತಿಪರ ಕಳ್ಳರಲ್ಲ, ಮದ್ಯವ್ಯಸನಿಗಳಷ್ಟೇ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ. ಗದಗ ಗ್ರಾಮೀಣ ಠಾಣೆ, ಹಾಗೂ ಅಬಕಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today