Viral Video: ಹಾರ್ಡ್ ವೇರ್ ಅಂಗಡಿಯಲ್ಲಿ ಕದ್ದು ಖುಷಿ ಪಟ್ಟ ಕಳ್ಳ, ಡಾನ್ಸ್ ವೈರಲ್
ಲಖನೌ: ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳನೊಬ್ಬ ಕದ್ದ ಬಳಿಕ ಖುಷಿ ಪಟ್ಟು ಡ್ಯಾನ್ಸ್ ಮಾಡಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಚಂದೌಲಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಕಳ್ಳತನ ನಡೆದಿದೆ. ಹಾರ್ಡ್‌ವೇರ್ ಅಂಗಡಿಯ ಶಟರ್ ಅನ್ನು ಮುರಿದು ಕಳ್ಳತನ ಮಾಡಲಾಗಿದೆ. ಶಟರ್ ಒಡೆದು ಒಳನುಗ್ಗಿ ಕೆಲವು ವಸ್ತುಗಳು ಹಾಗೂ ನಗದನ್ನು ಕದ್ದೊಯ್ದಿದ್ದಾನೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಕಳ್ಳ ಕದ್ದ ಬಳಿಕ ಅಂಗಡಿಯಲ್ಲಿ ಡ್ಯಾನ್ಸ್ ಮಾಡಿದ್ದಾನೆ. ಆ ನಂತರ ನಿಧಾನವಾಗಿ ಅಲ್ಲಿಂದ ಪರಾರಿಯಾಗಿದ್ದಾನೆ.
ಮರುದಿನ ಹಾರ್ಡ್ ವೇರ್ ಅಂಗಡಿಗೆ ಬಂದ ಮಾಲೀಕರು ಶಟರ್ ಒಡೆದಿರುವುದನ್ನು ಕಂಡು ಆತಂಕಗೊಂಡರು. ಒಳಗೆ ಹೋಗಿ ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ನಂತರ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಇದನ್ನು ಆಧರಿಸಿ ಅಂಗಡಿ ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳ ಕೆಲ ವಸ್ತುಗಳ ಜತೆಗೆ 6 ಸಾವಿರ ನಗದು ದೋಚಿದ್ದಾನೆ ಎನ್ನಲಾಗಿದೆ.
यूपी में अब चोर चोरी के बाद जश्न मना रहा है चंदौली में @chandaulipolice आपकी कोई ज़िम्मेदारी है क्या ? @adgzonelucknow pic.twitter.com/RTnNJdScEa
— Manoj KAKA (@ManojSinghKAKA) April 18, 2022
ಈ ನಡುವೆ ಮನೋಜ್ ಎಂಬ ವ್ಯಕ್ತಿ ಸಿಸಿಟಿವಿಯಲ್ಲಿ ದಾಖಲಾಗಿದ್ದ ವಿಡಿಯೋ ತುಣುಕನ್ನು ತನ್ನ ಟ್ವಿಟ್ಟರ್ ನಲ್ಲಿ ಹಾಕಿದ್ದಾನೆ. ಪೊಲೀಸರೊಂದಿಗೆ ಚಂದೋಲಿ ಲಕ್ನೋ ವಲಯ ಎಡಿಜಿಯನ್ನು ಟ್ಯಾಗ್ ಮಾಡಿದ್ದಾರೆ. ಕಳ್ಳತನದ ನಂತರ ಈ ಕಳ್ಳ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ..
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Thief Dance After Robbing A Hardware Shop In Up