ಖೋಟಾ ನೋಟು ಚಲಾವಣೆ ಮೂವರ ಬಂಧನ

three arrested for circulation fake currency notes in vijayapura

ಕನ್ನಡ ನ್ಯೂಸ್ ಟುಡೇCrime News

ವಿಜಯಪುರ : ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿ ಅವರಿಂದ ರೂ. 100 ಮುಖ ಬೆಲೆಯ 77 ಖೋಟಾ ನೋಟು, ಕಲರ್ ಪ್ರಿಂಟಿಂಗ್ ಮಶೀನ್ ವಶಕ್ಕೆ ಪಡೆದಿದ್ದಾರೆ. ವಿಜಯಪುರ ನಗರದ ಎಪಿಎಂಸಿ ಪೊಲೀಸರು ಬಿಎಲ್‌ಡಿಇ ಎಂಜಿನಿಯರಿಂಗ್ ಕಾಲೇಜಿನ ಎದುರು ಬಂಧಿಸಿದ್ದಾರೆ.
ಚಾಬುಕಸಾಬ್ ದರ್ಗಾ ಬಳಿ ಖೋಟಾ ನೋಟು ಚಲಾಯಿಸುತ್ತಿದ್ದ ಆರೋಪಿಗಳು ಇವರಾಗಿದ್ದು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ದಸ್ತಗೀರ ಮೋದಿನಸಾಬ ಬೋರಗಿ, ವಿಜಯಪುರ ಜಿಲ್ಲೆಯ ಚಾಂದಕವಟೆ ಗ್ರಾಮದ ಸುಧಾಕರ ಉರ್ಫ್ ಸುರೇಶ ಬಸಣ್ಣ ನಾಟಿಕಾರ ಮತ್ತು ವಿಜಯಪುರ ಜಿಲ್ಲೆಯ ತೊರವಿ ಗ್ರಾಮದ ಮಹಿಬೂಬ ಗುಲಾಲಸಾಬ್ ವಾಲಿಕಾರ ಬಂಧಿತ ಆರೋಪಿಗಳಾಗಿದ್ದಾರೆ. ವಿಜಯಪುರ ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////

Quick Links : Crime News Kannada | Karnataka Crime News
ಕನ್ನಡ ನ್ಯೂಸ್ : ಬ್ರೇಕಿಂಗ್ ನ್ಯೂಸ್ ಮತ್ತು ಕನ್ನಡ ಲೈವ್ ನ್ಯೂಸ್ ನವೀಕರಣಗಳಿಗಾಗಿ Facebook  | Twitter । YouTube ಅನುಸರಿಸಿ.
Web Title : three arrested for circulation fake currency notes in vijayapura

ಖೋಟಾ ನೋಟು ಚಲಾವಣೆ ಮೂವರ ಬಂಧನ - Kannada News

Follow us On

FaceBook Google News