ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ : ಬಂಗಾರಪೇಟೆಯಲ್ಲಿ ಘಟನೆ

Three children drowned in drainage : ಮಳೆನೀರಿನಿಂದ ತುಂಬಿದ್ದ ಕಾಲುವೆಯಲ್ಲಿ ಕಾಲುವೆಯಲ್ಲಿ ಕುಳಿತಿದ್ದ ಜವರಾಯ ಮೂವರು ಮಕ್ಕಳ ಬಲಿಪಡೆದಿದ್ದಾನೆ

( Kannada News ) : ಕೋಲಾರ : ಮಳೆ ನೀರಿನಿಂದ ತುಂಬಿದ್ದ ಕಾಲುವೆಯ ನೀರಿನಲ್ಲಿ ಆಟವಾಡಲು ಹೋದ ಮೂವರು ಮಕ್ಕಳು ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಕುಂಬಾರಪಾಳ್ಯದ ಹೊರವಲಯದಲ್ಲಿ ನಡೆದಿದೆ. ( Three children killed on the outskirts of Kumbarapaliya in Bangarapet town in Kolar district )

ಮಳೆ ಬಂದಾಗಲೆಲ್ಲಾ ಅಲ್ಲಿನ ರೈಲ್ವೆ ಅಂಡರ್ ಪಾಸ್​ ನಲ್ಲಿ ನೀರು ತುಂಬುತ್ತದೆ. ಇತ್ತೀಚೆಗೆ ಸುರಿದಿದ್ದ ಮಳೆಯಿಂದ ರೈಲ್ವೇ ಸೇತುವೆಯಲ್ಲಿ ಬಾರಿ ನೀರು ನಿಂತಿತ್ತು, ಆ ನೀರನ್ನು ಹೊರಹಾಕಲೆಂದು ಕಾಲುವೆಯನ್ನ ಕೊರೆಯಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ : ಪರ ಪುರುಷನೊಂದಿಗೆ ಓಡಿಹೋದ ವಿವಾಹಿತ ಮಹಿಳೆ, ಗ್ರಾಮಸ್ಥರು ಕೊಟ್ಟ ಶಿಕ್ಷೆ ಏನು ಗೊತ್ತಾ ?

ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ : ಬಂಗಾರಪೇಟೆಯಲ್ಲಿ ಘಟನೆ - Kannada News

ಈ ಕಾಲುವೆ ಬಳಿ ಆಟವಾಡಲು ಹೋದ ಮಕ್ಕಳು ಕಾಲುವೆಗೆ ಇಳಿದಿದ್ದು, ಈ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ, ಈ ದುರ್ಘಟನೆ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಇನ್ನು ಈ ದುರಂತದಲ್ಲಿ ಮೃತಪಟ್ಟ ಮಕ್ಕಳನ್ನು ಕುಂಬಾರಪಾಳ್ಯದ 8 ವರ್ಷದ ಬಾಲಕಿ ಮೆಹಿಕ್, 12 ವರ್ಷದ ಸಾದಿಕ್ ಮತ್ತು 7 ವರ್ಷದ ಫಯಾಜ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಬಂದ ಬಂಗಾರಪೇಟೆ ಪೊಲೀಸರು ಮಕ್ಕಳ ಮೃತದೇಹಗಳನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ “ನಕಲಿ ಸ್ಟಾಂಪ್ ಪೇಪರ್ ದಂದೆ”, ನಾಲ್ವರ ಬಂಧನ

ಘಟನೆ ಸಂಬಂಧಿಸಿದಂತೆ ಪೋಷಕರು ರೈಲ್ವೆ ಇಲಾಖೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಸ್ಥಳದಲ್ಲಿ ಮೃತ ಬಾಲಕರ ಪೋಷಕರ ರೋಧನೆ ಮುಗುಲುಮುಟ್ಟಿತ್ತು. ಇನ್ನಾದರೂ, ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ ಹೊಂದಿರುವುದಾದರೂ ಪಾಠವಾಗಿ ಅವೈಜ್ಞಾನಿಕ ಅಂಡರ್ ಪಾಸ್ ಗಳು, ಕಾಲುವೆಗಳು ತೆರವುಗೊಳ್ಳುತ್ತದೆಯೇ ಕಾದು ನೋಡಬೇಕಿದೆ…

Follow us On

FaceBook Google News

Read More News Today