ಅಥಣಿ ಹೊರವಲಯದಲ್ಲಿ ಭೀಕರ ಅಪಘಾತ, ಇಬ್ಬರು ಸಾವು

ಅಥಣಿ ಹೊರವಲಯದಲ್ಲಿರುವ ಬಣಜವಾಡ ಕಾಲೇಜಿಗೆ ಹೊರಟಿದ್ದ ಬಸ್ಸಿಗೆ ಟ್ರಕ್ಕೊಂದು ಅಪ್ಪಳಿಸಿದ ಪರಿಣಾಮ ಇಬ್ಬರೂ ಚಾಲಕರು ಸಾವಿಗಿಡಾಗಿದ್ದಾರೆ

ಅಥಣಿ (Athani outskirts) ಹೊರವಲಯದಲ್ಲಿ ಭೀಕರ ಅಪಘಾತ (Accident) ಸಂಭವಿಸಿದೆ, ಬಣಜವಾಡ ಕಾಲೇಜಿಗೆ (Banajawad Colleage) ಹೊರಟಿದ್ದ ಬಸ್ಸಿಗೆ ಟ್ರಕ್ಕೊಂದು ಅಪ್ಪಳಿಸಿದ ಪರಿಣಾಮ ಇಬ್ಬರೂ ಚಾಲಕರು ಸಾವಿಗಿಡಾಗಿದ್ದಾರೆ. 15 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಶಾಲಾ ಸಿಬ್ಬಂದಿಯೊಬ್ಬರ ಕೈ, ಕಾಲು ತುಂಡಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ. ಹೌದು ಅಥಣಿ ಪಟ್ಟಣದಿಂದ ಎಂದಿನಂತೆ ಬಸ್ ವಿದ್ಯಾರ್ಥಿನಿಯರನ್ನು ಬಣಜವಾಡಕ್ಕೆ ಕರೆದೊಯ್ಯುತ್ತಿತ್ತು. ಬೆಳಗ್ಗೆ 7:45ರ ಹೊತ್ತಿಗೆ ಮೀರಜ್ ದಿಂದ ಅಥಣಿ ಕಡೆಗೆ ಬರುತ್ತಿದ್ದ ಟ್ರಕ್ ಬಸ್ಸಿಗೆ ಅಪ್ಪಳಿಸಿದೆ. ಟ್ರಕ್ ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿರಬಹುದೆಂದು ಶಂಕಿಸಲಾಗಿದೆ.

ಅಥಣಿ ಹೊರವಲಯದಲ್ಲಿ ಭೀಕರ ಅಪಘಾತ, ಇಬ್ಬರು ಸಾವು

ಅಥಣಿ ಹೊರವಲಯದಲ್ಲಿ ಭೀಕರ ಅಪಘಾತ, ಇಬ್ಬರು ಸಾವು - Kannada News

ಅಪಘಾತದ ತೀವ್ರತೆಗೆ ಟ್ರಕ್ ಮುಂಭಾಗ ಬಸ್ ಒಳಗಡೆ ಸಿಕ್ಕಿ ಹಾಕಿಕೊಂಡಿದ್ದು, ಟ್ರ್ಯಾಕ್ಟರ್ ಬಳಸಿ ತೆಗೆಯುವ ಪ್ರಯತ್ನ ಮಾಡಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಲಾಗುತ್ತಿದೆ.

Belagavi Athani Accident

Two killed in a horrific accident on the outskirts of Athani

– ಬಸವರಾಜ್ ಖೇಮಲಾಪುರ್, ಅಥಣಿ

Follow us On

FaceBook Google News

Advertisement

ಅಥಣಿ ಹೊರವಲಯದಲ್ಲಿ ಭೀಕರ ಅಪಘಾತ, ಇಬ್ಬರು ಸಾವು - Kannada News

Read More News Today