ಮಣ್ಣು ಕುಸಿದು ಇಬ್ಬರ ಬಲಿ, ಜೆಸಿಬಿಯಲ್ಲಿ ಕೂತಿದ್ದ ಜವರಾಯ
Two people were killed when the mud collapsed for the negligence of the JCB driver
ಮಣ್ಣು ಕುಸಿದು ಇಬ್ಬರ ಬಲಿ, ಜೆಸಿಬಿಯಲ್ಲಿ ಕೂತಿದ್ದ ಜವರಾಯ
ಅವರು ಕೆಲಸ ಆರಿಸಿ ತಮ್ಮ ಮನೆ ಮಟ ಬಿಟ್ಟು ಜಾರ್ಕಂಡ್ ನಿಂದ ಬಂದಿದ್ದರು, ಸಿಗೋ ಕೆಲಸ ಮಾಡಿ ಬರೋ ಹಣದಿಂದ ತೃಪ್ತಿ ಪಟ್ಕೋತಾ ಇದ್ರು, ಆದ್ರೆ ಅವರಿಗೆ ನೆನ್ನೆಯ ದಿನ ಎಂದಿನಂತೆ ಇರಲಿಲ್ಲ, ಕೆಲಸ ಮಾಡುವಾಗ ಮಣ್ಣು ಕುಸಿದು ಆ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ.
ಹೌದು ಜಾರ್ಕಂಡ್ ಮೂಲದ ಸುದರ್ಶನ್ ಮತ್ತು ಶಫಿ , ಬೆಂಗಳೂರಿನ ಪುಲಕೇಶಿನಗರದ ರಾಜಕಾಲುವೆಯ ದುರಸ್ತಿ ವೇಳೆ ಮಣ್ಣು ಕುಸಿದು ಮೃತ ಪಟ್ಟಿದ್ದಾರೆ. ರಾಜಕಾಲುವೆಯ ಮಣ್ಣು ತೆರವು ಗೊಳಿಸುತ್ತಿದ್ದ ಜೆಸಿಬಿ ಚಾಲಕ ನಿರ್ಲಕ್ಸ್ಯದಿಂದ ಕಾಂಪೋಂಡ್ ತಳದ ಮಣ್ಣು ತೆಗೆದಾಗ ಮಣ್ಣು ಕುಸಿದಿದೆ, ಪರಿಣಾಮ ಮಣ್ಣಿನ ಅಡಿಯಲ್ಲಿ ಸಿಲುಕಿದ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಕಾಲುವೆಯಲ್ಲಿ ಪೈಪ್ ಅಳವಡಿಸುತ್ತಿದ್ದ ಕಾರ್ಮಿಕರು ಒಮ್ಮೆಲೇ ಬಿದ್ದ ಮಣ್ಣಿನ ಅಡಿಯಲ್ಲಿ ಸಿಲುಕಿ ಪ್ರಾಣಬಿಟ್ಟಿದ್ದಾರೆ, ಸುದರ್ಶನ್ ಸ್ಥಳದಲ್ಲೇ ಮೃತಪಟ್ಟರೆ, ಶಫಿ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಕೊನೆಯುಸಿರೆಳೆದಿದ್ದಾರೆ, ಸದ್ಯ ಘಟನೆಗೆ ಜೆಸಿಬಿ ಚಾಲಕನ ನಿರ್ಲಕ್ಷವೇ ಕಾರಣ ಎಂದು ತಿಳಿದು ಬಂದಿದೆ. ನೆನ್ನೆ ಸಂಜೆ ಈ ಘಟನೆ ನಡೆದಿದ್ದು ಸಧ್ಯ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Web Title : Two people were killed when the mud collapsed for the negligence of the JCB driver
Follow us On
Google News |