ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಆಕೆ ತಂದೆಯನ್ನು ಕೊಂದ ಅತ್ಯಾಚಾರಿ

uttar-pradesh-minor-girl-father-shot-dead

ಕನ್ನಡ ನ್ಯೂಸ್ ಟುಡೇIndia News

ಉತ್ತರ ಪ್ರದೇಶ : ಅಪರಾಧಗಳು ಹೆಚ್ಚುತ್ತಿರುವ ಉತ್ತರ ಪ್ರದೇಶದಲ್ಲಿ, ಅತ್ಯಾಚಾರಿಗಳು ರಾಜಾರೋಷವಾಗಿ ಅಡ್ಡಾಡುತ್ತಿದ್ದಾರೆ. ಕಳೆದ ವರ್ಷ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬ ಈಗ ಆಕೆಯ ತಂದೆಯನ್ನು ಗುಂಡಿಕ್ಕಿ ಕೊಂದಿದ್ದಾನೆ.  ಕೊಲ್ಲುವ ಮೊದಲು ಇದೆ ವಾರದಲ್ಲಿ ಎರಡು ಬಾರಿ ಮೊದಲೇ ಕೊಲೆ ಬೆದರಿಕೆ ಹಾಕಲಾಗಿತ್ತು, ಎಂದು ತಿಳಿದು ಬಂದಿದೆ. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈ ಕೊಂಡಿರಲಿಲ್ಲ..

ಪೊಲೀಸರ ಪ್ರಕಾರ, ಅಚ್ಮಾನ್ ಉಪಾಧ್ಯಾಯ ಎಂಬಾತ ಕಳೆದ ವರ್ಷ ಫಿರೋಜಾಬಾದ್ ಜಿಲ್ಲೆಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆದಾಗ್ಯೂ, ಪೊಲೀಸರು ಅದನ್ನು ಲೆಕ್ಕಿಸಲಿರಲಿಲ್ಲ.

ನಂತರದ ದಿನಗಳಲ್ಲಿ ಉಪಾಧ್ಯಾಯ ತನ್ನ ಮೇಲಿನ ಪ್ರಕರಣವನ್ನು ಹಿಂಪಡೆಯಲು ಬೆದರಿಕೆ ಹಾಕಿದ್ದನು. ಹಾಗೂ ಕೇಸ್ ವಾಪಸ್ ಪಡೆಯದಿದ್ದರೆ ನಿಮ್ಮ ಮನೆಯಲ್ಲಿ ಯಾರನ್ನಾದರೂ ಕೊಲ್ಲುತ್ತೀನಿ ಎಂದು ಎಚ್ಚರಿಸಿದ್ದನು. ಆದರೆ ಅತ್ಯಾಚಾರ ಸಂತ್ರಸ್ತೆ ಕುಟುಂಬ ಈ ಬಗ್ಗೆ ಮತ್ತೊಮ್ಮೆ ಪೊಲೀಸ್ ಠಾಣೆಗೆ ಹೋದರು.

ಪ್ರಕರಣ ಇಷ್ಟೊಂದು ದೊಡ್ಡ ಮಟ್ಟಕ್ಕೆ ಹೋದರೂ ಪೊಲೀಸರು ಅದನ್ನು ಮತ್ತೆ ಲೆಕ್ಕಿಸಲಿಲ್ಲ.ಕೊನೆಗೆ ಉಪಾಧ್ಯಾಯ ಸೋಮವಾರ ಸಂತ್ರಸ್ತೆಯ ತಂದೆಯನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದಿದ್ದಾನೆ. ಇದರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗಳು ಕೆರಳುತ್ತಿವೆ. ಯೋಗಿ ಆದಿತ್ಯನಾಥ್ ಸರ್ಕಾರವು ಮೂವರು ಪೊಲೀಸ್ ಅಧಿಕಾರಿಗಳನ್ನು ಸದ್ಯಕ್ಕೆ ಅಮಾನತುಗೊಳಿಸಿದೆ.

Web Title :uttar pradesh minor girl father shot dead
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.