ಉತ್ತರ ಪ್ರದೇಶ: ಪೊಲೀಸ್ ಕಸ್ಟಡಿಯಲ್ಲಿ ಯುವಕ ಸಾವು !

ಪೊಲೀಸ್ ಕಸ್ಟಡಿಲ್ಲಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಆರೋಪಿಯ ಸಾವು ಆತ್ಮಹತ್ಯೆ ಎಂದು ಪೊಲೀಸರು ಹೇಳಿದರೆ, ಯುವಕನ ಕುಟುಂಬಸ್ಥರು ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

🌐 Kannada News :

ಲಕ್ನೋ:  ಪೊಲೀಸ್ ಕಸ್ಟಡಿಲ್ಲಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಆರೋಪಿಯ ಸಾವು ಆತ್ಮಹತ್ಯೆ ಎಂದು ಪೊಲೀಸರು ಹೇಳಿದರೆ, ಯುವಕನ ಕುಟುಂಬಸ್ಥರು ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಮಂಗಳವಾರ (ನವೆಂಬರ್ 9) ಈ ಘಟನೆ ನಡೆದಿದೆ. ಮೃತರನ್ನು ಸದರ್ ಕೊತ್ವಾಲಿ ಪ್ರದೇಶದ ಅಲ್ತಾಫ್ ಅವರ ಪುತ್ರ ಚಾಂದ್ ಮಿಯಾನ್ ಎಂದು ಗುರುತಿಸಲಾಗಿದೆ. ವಿವರಕ್ಕೆ ಹೋಗುವುದಾದರೆ.. ಯುವತಿಯನ್ನು ಕರೆದುಕೊಂಡು ಪರಾರಿಯಾಗಿದ್ದ ಪ್ರಕರಣದಲ್ಲಿ ಯುವಕ ಅಲ್ತಾಫ್ ನನ್ನು ಪೊಲೀಸರು ಸೋಮವಾರ ಬೆಳಗ್ಗೆ ಕಾಸ್ಗಂಜ್ ನ ಸದರ್ ಕೊತ್ವಾಲ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು.

ವಿಚಾರಣೆಯ ಸಮಯದಲ್ಲಿ ಬಾತ್ ರೂಂಗೆ ಹೋದ ಆತ, ಬಾತ್ರೂಮ್ ಒಳಗೆ ಹೋಗಿ ಬೀಗ ಹಾಕಿಕೊಂಡಿದ್ದ. ಸ್ವಲ್ಪ ಸಮಯ ಕಳೆದರೂ ಹೊರಗೆ ಬರದ ಕಾರಣ ಪೊಲೀಸರು ಬಾತ್ ರೂಂ ಬಾಗಿಲು ಹೊಡೆದು ತೆರೆದಾಗ ಆತ ತನ್ನ ಜಾಕೆಟ್ ಅನ್ನು ಪೈಪ್ ಗೆ ಕಟ್ಟಿ ಕುತ್ತಿಗೆಗೆ ಸುತ್ತಿಕೊಂಡಿದ್ದನು… ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ, ಎಂದು ಪೊಲೀಸರು ತಿಳಿಸಿದ್ದಾರೆ

ಆದರೆ, ಪ್ರಾಥಮಿಕ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಐವರು ಪೊಲೀಸರನ್ನು ಎಸ್ಪಿ ರೋಹನ್ ಅಮಾನತುಗೊಳಿಸಿದ್ದಾರೆ. ಅವರಲ್ಲಿ ಒಬ್ಬ ಕಸಂಗಂಜ್ ಠಾಣಾಧಿಕಾರಿ, ಇಬ್ಬರು ಎಸ್ಸೈಗಳು, ಹೆಡ್ ಕಾನ್‌ಸ್ಟೆಬಲ್ ಮತ್ತು ಒಬ್ಬ ಕಾನ್‌ಸ್ಟೆಬಲ್ ಸೇರಿದ್ದಾರೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today