ಗಂಡನ ಹತ್ಯೆಗೆ ಹೆಂಡತಿ ಕೊಟ್ಲು ಸುಪಾರಿ, ಆಮೇಲೆ ಆಗಿದ್ದೇ ಇಂಟ್ರೆಸ್ಟಿಂಗ್

Wife Gave supari to kill her husband, After that Twist in the story

ಗಂಡನ ಹತ್ಯೆಗೆ ಹೆಂಡತಿ ಕೊಟ್ಲು ಸುಪಾರಿ, ಆಮೇಲೆ ಆಗಿದ್ದೇ ಇಂಟ್ರೆಸ್ಟಿಂಗ್

ಕನ್ನಡ ನ್ಯೂಸ್ ಟುಡೇ : ಇದಾವುದೋ ಸಿನಿಮಾ ಕಥೆಯಲ್ಲ ! ಆದರೂ ಸಿನಿಮಾಗಳಿಗೆ ಹೋಲುವ ಕಥೆಯೇ ಹೌದು. ತನ್ನ ಗಂಡನನ್ನೇ ಕೊಲ್ಲಲು ಸುಪಾರಿ ಕೊಟ್ಟ ಹೆಂಡಿತಿಯ ರಿಯಲ್ ಕಹಾನಿ ಇದು. ಕುಖ್ಯಾತ ರೌಡಿಯಿಂದ ತನ್ನ ಪತಿಯನ್ನು ಕೊಲೆ ಮಾಡಿಸಲು ಸಂಚಿನ ಆರೋಪದ ಮೇಲೆ ಮಾಥೂರು ಪೊಲೀಸರು ರೌಡಿಯನ್ನು ಬಂಧಿಸಿದ್ದಾರೆ. 

ಪೊಲೀಸರ ಪ್ರಕಾರ, ಕೃಷ್ಣಗಿರಿ ಜಿಲ್ಲೆಯ ಅಣ್ಣಾನಗರದ ಮಾದೇಶ್ (32) ಪತ್ನಿ (27) ದಂಪತಿಗಳು 10 ವರ್ಷಗಳ ಹಿಂದೆ ವಿವಾಹವಾಗಿದ್ದರು ಮತ್ತು ಇವರಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಮುದ್ದಾದ ಎರಡು ಮಕ್ಕಳನ್ನು ಸಹ ಹೊಂದಿದ್ದಾರೆ. ಗಂಡ ಹೆಂಡತಿ ನಡುವೆ ಕೆಲವು ದಿನಗಳಿಂದ ನಿರಂತರ ಜಗಳ.

ಹೇಗಾದರೂ ಮಾಡಿ ಈ ಗಂಡನಿಂದ ಮುಕ್ತಿ ಪಡೆಯಬೇಕು ಎಂದು ನಿರ್ಧರಿಸದ್ದ, ಹೆಂಡತಿ ಪ್ರಮುಖ ರೌಡಿಯನ್ನು ಸಂಪರ್ಕಿಸಿ ಗಂಡನನ್ನು ಕೊಳ್ಳಲು ಡೀಲ್ ಕುದಿರಿಸಿದ್ದಾಳೆ, “ಹೇಗಾದರೂ ಮಾಡಿ ನನ್ನ ಗಂಡನನ್ನು ಎತ್ ಬಿಡಿ. ಅವನ ಕಥೆ ಮುಗಿಸಿದ್ರೆ ಎರಡು ಲಕ್ಷ ಕೊಡ್ತೀನಿ, ಸಧ್ಯಕ್ಕೆ ಇಟ್ಕೊಳಿ” ಅಂತ 30 ಸಾವಿರ ಅಡ್ವಾನ್ಸ್ ಕೊಟ್ಟಳು.

ಗಂಡನ ಹತ್ಯೆಗೆ ಹೆಂಡತಿ ಕೊಟ್ಲು ಸುಪಾರಿ, ಆಮೇಲೆ ಆಗಿದ್ದೇ ಇಂಟ್ರೆಸ್ಟಿಂಗ್ - Kannada News

ಸುಪಾರಿ ಸ್ಕೆಚ್ – ಕಥೆಯಲ್ಲಿ ಟ್ವಿಸ್ಟ್ 

ಆದರೆ ಡೀಲ್ ಪಡೆದ ರೌಡಿ ಮನಸಲ್ಲಿ ಬೇರೆಯದೇ ಆಲೋಚನೆ ಹೊಳೆಯುತ್ತದೆ, ಹೇಗೋ ಇವಳಿಂದ ಹಣ ಬರೋದು ಗ್ಯಾರಂಟಿ, ಹಾಗೆ ಗಂಡನ ಬಳಿಯೂ ಸ್ವಲ್ಪ ಹಣ ವಸೂಲಿ ಮಾಡಿದರಾಯಿತು, ಅಂತ ಆ ರೌಡಿ ಆಕೆಯ ಗಂಡನನ್ನು ಭೇಟಿಯಾಗುತ್ತಾನೆ.

ಗಂಡನನ್ನು ಭೇಟಿ ಮಾಡಿದ ರೌಡಿ ನಡೆದ ವಿಚಾರವನ್ನು ಬಿಚ್ಚಿಡುತ್ತಾನೆ, ” ನಿನ್ನ ಹೆಂಡತಿ ನಿನ್ನನ್ನು ಕೊಲ್ಲಲು, ನನಗೆ ಹಣ ಕೊಟ್ಟಿದ್ದಾಳೆ, ನೀನು ನನಗೆ 3 ಲಕ್ಷ ಕೊಟ್ಟರೆ, ನಾವ್ ನಿನ್ನನ್ನು ಕೊಲ್ಲುವಂತೆ ನಾಟಕ ಮಾಡುತ್ತೇವೆ, ನೀನಾಗ ತಪ್ಪಿಸಿಕೊಂಡು ಓಡಿಹೋಗು. ಎಂದು ತಿಳಿಸಿದ್ದಾರೆ.

ವಿಚಾರ ತಿಳಿದು ಜಾಗ್ರತೆಗೊಂಡ ಮಾದೇಶ್, ತನ್ನ ಹತ್ತು ಜನ ಸ್ನೇಹಿತರನ್ನು ಒಟ್ಟು ಗೂಡಿಸಿ, ರೌಡಿ ವಿಷ್ಣುವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ರೌಡಿ ವಿಷ್ಣುವನ್ನು ವಶಕ್ಕೆ ಪಡೆದು, ನಿಜಕ್ಕೂ ಆಕೆ ಗಂಡನನ್ನು ಕೊಲ್ಲಲು ಸುಪಾರಿ ನೀಡಿದ್ದಾಳಾ ? ಅಥವಾ ಮಾದೇಶ್ ಬಳಿ ದುಡ್ಡು ವಸೂಲಿ ಮಾಡಲು ಈ ಡ್ರಾಮ ನಡೆದಿದೆಯಾ? ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ////

Web Title : Wife Gave supari to kill her husband, After that After that Twist in the story

Follow us On

FaceBook Google News

Read More News Today