Crime News: ಪತಿ ತಲೆ ಮೇಲೆ ಕಲ್ಲೆಸೆದು ಕೊಂದ ಪತ್ನಿ! ಯಾಕೆ ಗೊತ್ತಾ ?

wife killed her husband: ಕುಡಿದ ಅಮಲಿನಲ್ಲಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಕೊಂದಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಫಾರೂಕ್‌ನಗರ ವಲಯದ ರಂಗಂಪಲ್ಲಿ ಗ್ರಾಮದಲ್ಲಿ ನಡೆದಿದೆ.

ತೆಲಂಗಾಣ (wife killed her husband): ಕುಡಿದ ಅಮಲಿನಲ್ಲಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಕೊಂದಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಫಾರೂಕ್‌ನಗರ ವಲಯದ ರಂಗಂಪಲ್ಲಿ ಗ್ರಾಮದಲ್ಲಿ ನಡೆದಿದೆ.

ಎಷ್ಟು ದಿನ ತಾನೇ ಸಹಿಸೋದು ಅಂತ ಆಕೆ ಅಂದುಕೊಂಡಳೋ ಏನೋ… ಪ್ರತಿ ದಿನ ಆತನ ಕಾಟಕ್ಕೆ ಸತ್ತು ಬದುಕುತ್ತಿದ್ದಳು, ಆದರೆ ತನ್ನ ಗಂಡ ತಾನೇ ಅಂತ ನೋವನ್ನ ನುಂಗಿ ಸಂಸಾರ ಸಾಗಿಸುತ್ತಿದ್ದಳು.

ಪೋಲೀಸರ ಪ್ರಕಾರ, ರಂಗಂಪಲ್ಲಿಯ ದುರ್ಗಂ ನರಸಿಂಹುಲು (46) ಅಪರಾಧ ಹಿನ್ನೆಲೆ ಹೊಂದಿದ್ದ ವ್ಯಕ್ತಿ. ಇತ್ತೀಚೆಗೆ ಚರ್ಲಪಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದ.

Crime News: ಪತಿ ತಲೆ ಮೇಲೆ ಕಲ್ಲೆಸೆದು ಕೊಂದ ಪತ್ನಿ! ಯಾಕೆ ಗೊತ್ತಾ ? - Kannada News

ಕಿತಾಪತಿ ತೆಗೆಯೋದು, ಅವರಿವರನ್ನು ಎದುರಿಸಿ ಬೆದರಿಸಿ ಕುಡಿಯೋದು ಸಾಲದ್ದಕ್ಕೆ ಮನೆಗೆ ಬಂದಾಗ ಹೆಂಡತಿಯ ಮೇಲೆ ದರ್ಪ ತೋರೋದು ಅವನ ದಿನ ನಿತ್ಯದ ಕಾಯಕ.

ಅದಲ್ಲದೆ ಪತ್ನಿಯ ಮೇಲೆ ಅನುಮಾನ ಪಟ್ಟು ಕಿರುಕುಳ ನೀಡುತ್ತಿದ್ದು, ನಿತ್ಯ ಮದ್ಯ ಸೇವಿಸಿ ಬಂದು ಥಳಿಸುತ್ತಿದ್ದ. ಭಾನುವಾರ ಸಹ ಮಧ್ಯರಾತ್ರಿ ಕುಡಿದು ಬಂದು ಥಳಿಸಿ ಪತ್ನಿಗೆ ಕೊಲೆ ಬೆದರಿಕೆ ಹಾಕಿ ಮಲಗಿದ್ದ.

ಈ ವೇಳೆ ಪ್ರಾಣಭಯದಿಂದ ಪತ್ನಿ ಹಂಸಮ್ಮ ಪತಿ ತಲೆ ಮೇಲೆ ಕಲ್ಲೆಸೆದು ಸಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow us On

FaceBook Google News