Welcome To Kannada News Today

Woman Dead Body: ರಸ್ತೆಯಲ್ಲಿ ಕಾರಿನಿಂದ ಹೊರಕ್ಕೆ ಎಸೆದ ಮಹಿಳೆ ಮೃತದೇಹ

Woman Dead Body in Main Road: ಮಹಿಳೆ ಮೃತ ದೇಹವನ್ನು ಕಾರಿನಿಂದ ಹೊರಗೆಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ, ಇದೀಗ ಮಹಿಳೆಯ ಕೊಲೆ ಪ್ರಕರಣ ತಮಿಳುನಾಡಿನ ಕೊಯಮತ್ತೂರು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

🌐 Kannada News :

Woman Dead Body in Main Road : ಮಹಿಳೆ ಮೃತ ದೇಹವನ್ನು ಕಾರಿನಿಂದ ಹೊರಗೆಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ, ಇದೀಗ ಮಹಿಳೆಯ ಕೊಲೆ ಪ್ರಕರಣ ತಮಿಳುನಾಡಿನ ಕೊಯಮತ್ತೂರು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ನಡು ರಸ್ತೆಯಲ್ಲಿ ಮಹಿಳೆ ಮೃತದೇಹ, ಕಾರಿನಿಂದ ಹೊರಕ್ಕೆ ಎಸೆದು ಕೊಲೆಗಾರರು ಎಸ್ಕೇಪ್.. ಆ ಕೊಲೆಗಾರ ಯಾರು? ಆ ಮಹಿಳೆ ಯಾರು? ಎಂಬ ಹಲವು ಅನುಮಾನಗಳೊಂದಿಗೆ ಮಹಿಳೆಯ ಕೊಲೆ ಪ್ರಕರಣ ತಮಿಳುನಾಡಿನ ಕೊಯಮತ್ತೂರು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಆ ಮಹಿಳೆಯನ್ನು ಕೊಂದವರು ಯಾರು? ಆಕೆಯನ್ನು ಏಕೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಯಮತ್ತೂರು ಚಿನ್ನಿಪಾಳ್ಯಂ ಬಳಿ ಹೆದ್ದಾರಿಯಲ್ಲಿ ಮಹಿಳೆಯ ಶವವನ್ನು ಅಪರಿಚಿತ ವ್ಯಕ್ತಿಗಳು ಎಸೆದಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಹಿಳೆಗೆ 45 ವರ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ. ರಸ್ತೆಯಲ್ಲಿದ್ದ ಮಹಿಳೆಯ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಮಹಿಳೆಯನ್ನು ಕೊಂದು ಹೆದ್ದಾರಿಯಲ್ಲಿ ಎಸೆದು ಹೋಗಲಾಗಿದೆ. ಆಕೆಯ ಕುತ್ತಿಗೆಗೆ ಗಂಭೀರ ಗಾಯಗಳಾಗಿದೆ, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile