ಬೆಂಗಳೂರು : ಬಾಡಿಗೆ ಕೊಟ್ಟಿಲ್ಲವೆಂದು ಮಹಿಳೆಗೆ ಚೂರಿ ಇರಿದ ಮನೆಯೊಡತಿ

ನಾಲ್ಕು ತಿಂಗಳಿನಿಂದ ಬಾಡಿಗೆ ಕೊಟ್ಟಿಲ್ಲವೆಂದು ಮಹಿಳೆಗೆ ಮನ ಬಂದಂತೆ ಚೂರಿ ಇರಿದ ಮನೆಯೊಡತಿ ಮಹಾಲಕ್ಷ್ಮಿ(40) ಎಂಬಾಕೆಯನ್ನು ಬಂಧಿಸಲಾಗಿದೆ. ಬೆಂಗಳೂರು: ನಾಲ್ಕು ತಿಂಗಳಿಂದ ಮನೆ ಬಾಡಿಗೆ ಕೊಟ್ಟಿಲ್ಲವೆಂದು ಮಹಿಳೆಯ ಮೇಲೆ ಮನ ಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ ಮನೆಯೊಡತಿಯನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಡಿಗೆದಾರರಾದ ಪೂರ್ಣಿಮಾ ಮೇಲೆ ಹಲ್ಲೆಮಾಡಿದ ಆರೋಪದಲ್ಲಿ ಮಹಾಲಕ್ಷ್ಮಿ(40) ಎಂಬಾಕೆಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ - Woman landlord stabs tenant over rent delay in Bengaluru

🌐 Kannada News :

( Kannada News Today ) : ಬೆಂಗಳೂರು : ಬಾಡಿಗೆ ವಿವಾದದ ಸಂದರ್ಭದಲ್ಲಿ ತನ್ನ ಬಾಡಿಗೆದಾರರಿಗೆ ಇರಿದ ಮನೆಯೊಡತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

ಮನೆ ಬಾಡಿಗೆ ಕೊಟ್ಟಿಲ್ಲವೆಂದು ಮಹಿಳೆಯ ಚಾಕುವಿನಿಂದ ಹಲ್ಲೆ ಮಾಡಿದ ಬೆಂಗಳೂರಿನಲ್ಲಿ ನಡೆದಿದೆ, ಹಲ್ಲೆ ಮಾಡಿದ ಮನೆಯೊಡತಿಯನ್ನು ರಾಜಗೋಪಾಲ ನಗರ ಪೊಲೀಸರು ಬಂಧಿಸಿದ್ದಾರೆ.

ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಪೂರ್ಣಿಮಾ ಎಂಬುವವರ ಮೇಲೆ ಹಲ್ಲೆಮಾಡಿದ ಆರೋಪದಲ್ಲಿ ಮಹಾಲಕ್ಷ್ಮಿ(40) ಎಂಬ ಮನೆ ಮಾಲಿಕಳನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ಘಟನೆಯು ಲಗ್ಗೆರೆಯಲ್ಲಿ ನಡೆದಿದ್ದು, ಲಗ್ಗೆರೆಯಲ್ಲಿ ಮಹಾಲಕ್ಷ್ಮಿ ತನ್ನ ಬಾಡಿಗೆ ಮನೆಯನ್ನು, ರವಿಚಂದ್ರ ಮತ್ತು ಪೂರ್ಣಿಮಾ ದಂಪತಿಗೆ ಬಾಡಿಗೆಗೆ ನೀಡಿದ್ದರು.

ಆದರೆ, ಅದು ಯಾವ ಸಮಸ್ಯೆಯೋ, ಕಳೆದ ೪ ತಿಂಗಳಿನಿಂದ ಈ ದಂಪತಿಗೆ ಬಾಡಿಗೆ ಕಟ್ಟಲು ಆಗಿರಲಿಲ್ಲ.

ಈ ವೇಳೆ ಬಾಡಿಗೆ ವಿಚಾರಿಸಲು ಮನೆ ಮಾಲಿಕಿ ಇದೇ ಶುಕ್ರವಾರ ರಾತ್ರಿ ಸುಮಾರು 8.30 ರ ಸುಮಾರಿಗೆ ಪೂರ್ಣಿಮಾ ಮನೆಗೆ ಹೋಗಿದ್ದಾರೆ. ಈ ವೇಳೆ ಬಾಡಿಗೆ ಕಟ್ಟಲು ಪೂರ್ಣಿಮಾ ಕಾಲವಕಾಶ ನೀಡುವಂತೆ ಕೇಳಿದ್ದಾರೆ, ಇಲ್ಲವೇ ಈ ಮುಂದೆ ಕಟ್ಟಿರುವ ಹಣದಲ್ಲಿ ಬಾಡಿಗೆಯನ್ನು ಮುರಿದುಕೊಳ್ಳಲು ಹೇಳಿದ್ದಾರೆ.

ಪೂರ್ಣಿಮಾ ರ ಯಾವುದೇ ಮಾತಿಗೆ ಒಪ್ಪದ ಮಹಿಳೆ ಮನೆ ಖಾಲಿ ಮಾಡಲು ಒತ್ತಾಯಿಸಿದ್ದಾಳೆ. ಈಗೆ ಮಾತಿಗೆ ಮಾತು ಬೆಳೆದು ಮಹಾಲಕ್ಷ್ಮಿ, ಚಾಕುವಿನಿಂದ ಪೂರ್ಣಿಮಾ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದಾಳೆ. ಘಟನೆಯ ಸಮಯದಲ್ಲಿ ಪತಿ ಇರಲಿಲ್ಲ ಎಂದು ತಳಿದು ಬಂದಿದೆ.

ಇನ್ನು ಈ ಬಗ್ಗೆ ಸ್ಥಳೀಯರುಪೊಲೀಸರಿಗೆ ಮಾಹಿತಿ ನೀಡಿದ್ದು, ಗಾಯಾಳು ಪೂರ್ಣಿಮಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂರ್ಣಿಮಾ ಕಿರುಚಾಟ ಕೇಳಿದ ನೆರೆಹೊರೆಯವರು ಖಾಸಗಿ ಆಸ್ಪತ್ರೆಗೆ ಪೂರ್ಣಿಮಾರನ್ನು ಕರೆದೊಯ್ದಿದ್ದಾರೆ.

ಪೂರ್ಣಮಾ ಅವರು ಗಂಡನೊಂದಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನ ಪತಿಗೆ ಎರಡು ತಿಂಗಳಿನಿಂದ ಸಂಬಳ ಸಿಗಲಿಲ್ಲ ಎಂದು ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಚಾರಣೆಯ ನಂತರ ಮಹಾಲಕ್ಷ್ಮಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Web Title : Woman landlord stabs tenant over rent delay in Bengaluru

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.