Welcome To Kannada News Today

Crime News: ಕಾನ್ಸ್ಟೇಬಲ್ ನಿಂದ ಬ್ಲಾಕ್ ಮೇಲ್, ಯುವತಿ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರ

Woman Raped by Constable: ಯುವತಿಯ ಮೇಲೆ ಕಣ್ಣಾಕಿದ ಕಾನ್ಸ್ಟೇಬಲ್ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವ ಧಾರುಣ ಘಟನೆ ಯುವತಿ ಸಾವಿನ ಮೂಲಕ ಬಯಲಾಗಿದೆ.

🌐 Kannada News :

Woman Raped by Constable: ಯುವತಿಯ ಮೇಲೆ ಕಣ್ಣಾಕಿದ ಕಾನ್ಸ್ಟೇಬಲ್ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವ ಧಾರುಣ ಘಟನೆ ಯುವತಿ ಸಾವಿನ ಮೂಲಕ ಬಯಲಾಗಿದೆ.

ಆತ ವೃತ್ತಿಯಲ್ಲಿ ಟ್ರಾಫಿಕ್ ಕಾನ್ಸ್ಟೇಬಲ್, ಕಾನೂನುಗಳ ಬಗ್ಗೆ ಚೆನ್ನಾಗಿಯೇ ತಿಳಿದಿದ್ದ, ಆದರೆ ಕಾಮಾಂಧ ಯುವತಿಯೊಬ್ಬಳ ಮೇಲೆ ಕ್ರೂರವಾಗಿ ವರ್ತಿಸಿದ್ದ, ಮೊದಲು ಕೂಲ್ ಡ್ರಿಂಕ್ಸ್ ನಲ್ಲಿ ಮಟ್ಟಿನ ಪಧಾರ್ಥ ಕೊಟ್ಟು ಅತ್ಯಾಚಾರ ಎಸಗಿದ ನೀಚ, ನಂತರ ಆಕೆಗೆ ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋ ತೋರಿಸಿ ನಿರಂತರ ಅತ್ಯಾಚಾರ ಎಸಗುತ್ತಾ ಬಂದಿದ್ದ.

ಅಷ್ಟಕ್ಕೂ ಈತ ಬೇರಾರು ಅಲ್ಲ, ಯುವತಿಗೆ ಸಂಬಂಧದಲ್ಲಿ ಮಾವನಾಗ ಬೇಕು. ಆತ ಯುವತಿಯನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ಎರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ.

ಅಂತಿಮವಾಗಿ ಟ್ರಾಫಿಕ್ ಕಾನ್ಸ್ಟೇಬಲ್ ಕಿರುಕುಳ ತಾಳಲಾರದೆ ಯುವತಿ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ವರ್ಷಗಳಿಂದ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ನಿಂದ ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದರಿಂದ ಹಾಗೂ ಆತನ ಮಗನ ಕಿರುಕುಳದಿಂದ 25 ವರ್ಷದ ಮಹಿಳೆ ಭಾನುವಾರ ಗಂಗೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.

ವಿಚಾರವಾಗಿ ಆತ್ಮಹತ್ಯೆಗೂ ಮುನ್ನ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನದಿಗೆ ಹಾರಿದಳು ಎಂದು ಮಿರ್ಜಾಪುರ ಡಿಸಿಪಿ ಪ್ರಮೋದ್ ಕುಮಾರ್ ಹೇಳಿದ್ದಾರೆ. ಅಲ್ಲಿನ ಈಜುಗಾರರು ಮತ್ತು ಸಿಬ್ಬಂದಿಯ ಸಹಾಯದಿಂದ ಆಕೆಯನ್ನು ರಕ್ಷಿಸಲಾಗಿದೆ ಎಂದು ಡಿಸಿಪಿ ಹೇಳಿದರು.

ನಂತರ ಮಹಿಳೆ, ಟ್ರಾಫಿಕ್ ಪೊಲೀಸ್ ವಿರುದ್ಧ ದೂರು ನೀಡಿದ್ದು, ಜೊತೆಗೆ ಅವನ ಮಗನ ವಿರುದ್ಧ ಪ್ರಸಹ ಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile