ವಿದ್ಯುತ್ ತಗುಲಿ ಗೃಹಿಣಿ ಸಾವು, ಕೆ.ಆರ್.ಪುರಂ ನಲ್ಲಿ ಘಟನೆ
women died allegedly due to electric shock, incident at KR Puram
ವಿದ್ಯುತ್ ತಗುಲಿ ಗೃಹಿಣಿ ಸಾವು, ಕೆ.ಆರ್.ಪುರಂ ನಲ್ಲಿ ಘಟನೆ
ಕನ್ನಡ ನ್ಯೂಸ್ ಟುಡೇ : ಶ್ರಾವಣ ಮಾಸದ ಹಿನ್ನೆಲೆ ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ ಗೃಹಿಣಿಗೆ ವಿದ್ಯುತ್ ತಂತಿ ತಗುಲಿ ಮೃತ ಪಟ್ಟ ಘಟನೆ ನಡೆದಿದೆ. ಮೃತರನ್ನು ಗಾಯತ್ರಿ (26) ಎನ್ನಲಾಗಿದ್ದು, ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ ಮಂಜುನಾಥ್ ಎಂಬುವವರ ಪತ್ನಿ ಎಂದು ತಿಳಿದು ಬಂದಿದೆ.
ಗಾಯತ್ರಿ ಮತ್ತು ಮಂಜುನಾಥ್ ದಂಪತಿಗಳು ಕೆ.ಆರ್.ಪುರಂ ನ, ಪ್ರಿಯಾಂಕ ನಗರದ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ನೆಲೆಸಿದ್ದರು, ಶ್ರಾವಣ ಮಾಸಕ್ಕೆ ಮನೆಯನ್ನು ಸ್ವಚ್ಛ ಮಾಡುವುದಕ್ಕಾಗಿ, ಕಬ್ಬಿಣದ ಕಂಬಿಗೆ ಬಟ್ಟೆ ಸುತ್ತಿ, ಸ್ವಚ್ಛಗೊಳಿಸುತ್ತಿದ್ದರು. ಮನೆಯ ಹೊರ ಭಾಗವನ್ನು ಸ್ವಚ್ಛ ಗೊಳಿಸುತ್ತಿರುವಾಗ ಆಕಸ್ಮಿಕವಾಗಿ ಕೈನಲ್ಲಿದ್ದ ಕಂಬಿಯು ಮನೆಯ ಸಮೀಪದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ, ಗಾಯತ್ರಿಗೆ ವಿದ್ಯುತ್ ಪ್ರವಹಿಸಿದೆ.
ಘಟನೆ ನಡೆದ ಕೂಡಲೇ ಗಾಯತ್ರಿ ಅವರನ್ನು ಕುಟುಂಬ ಸದಸ್ಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲೇ ಗಾಯಿತ್ರಿ ಕೊನೆಯುಸಿರೆಳೆದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಮೃತಪಟ್ಟ ಗಾಯಿತ್ರಿ, ಪತಿ ಮಂಜುನಾಥ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆ ವೇಳೆ, ಕೆಲಸದ ಮೇಲೆ ಪತಿ ಮನೆಯಿಂದ ಹೊರಗೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಧ್ಯ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. /////
Web Title : women died allegedly due to electric shock, incident at KR Puram
Follow us On
Google News |