ಭಿಕ್ಷುಕಿ ಮೇಲೆ ಅತ್ಯಾಚಾರ, ಯಾದಗಿರಿಯಲ್ಲಿ ಘಟನೆ.. ಆರೋಪಿ ಬಂಧನ

ಭಿಕ್ಷುಕಿಗೆ ಮದ್ಯ ಕುಡಿಸಿದ ವ್ಯಕ್ತಿಯೋರ್ವ ಆತನು ಮದ್ಯ ಸೇವಿಸಿ ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಭಿಕ್ಷುಕಿಗೆ ಮದ್ಯ ಕುಡಿಸಿದ ವ್ಯಕ್ತಿಯೋರ್ವ ಆತನು ಮದ್ಯ ಸೇವಿಸಿ ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಮದ್ಯ ವ್ಯಸನಿಯಾಗಿದ್ದು ಹಣಮಂತ ಅಲಿಯಾಸ್ ಶಾಂತಪ್ಪ ಎನ್ನಲಾಗಿದೆ. ಈತ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ನಿವಾಸಿ. ಈತ ಅತ್ಯಾಚಾರ ಮಾಡುವಾಗ ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತ ಆಕೆ ನನ್ನ ಹೆಂಡತಿ ಎಂದು ನಾಟಕ ಮಾಡಿದ್ದಾನೆ. ನಂತರ ಸ್ಥಳೀಯರಿಗೆ ವಿಶ್ವಾಸ ಬರದೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ. ಮರುದಿನ ಮಹಿಳಾ ಪೊಲೀಸ್ ಠಾಣೆ ದೂರು ದಾಖಲಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆದಿದೆ.

Stay updated with us for all News in Kannada at Facebook | Twitter
Scroll Down To More News Today