Welcome To Kannada News Today

ಗೆಳೆಯ ಮಾತನಾಡಲಿಲ್ಲವೆಂದು ಮನನೊಂದು ಯುವತಿ ಆತ್ಮಹತ್ಯೆ

Young girl commits suicide in Chittoor district

🌐 Kannada News :

ಹೈದರಾಬಾದ್ : ಸ್ನೇಹಿತ ತನ್ನೊಂದಿಗೆ ಮಾತನಾಡಲಿಲ್ಲ ಎಂದು ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ, ಜಿತ್ತೂರು ಜಿಲ್ಲೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಅಲ್ಲಿನ ಇಂದಿರಮ್ಮ ಕಾಲೋನಿಯ ಅಂಜನಾದೇವಿ ಮಗಳೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಮೃತ ಯುವತಿಯನ್ನು ರಂಜಿತಾ (18) ಎಂದು ಗುರುತಿಸಲಾಗಿದೆ, ಆಕೆ ವಿಜಯವಾಡದ ಚೈತನ್ಯ ಕಾಲೇಜಿನಲ್ಲಿ ನೀಟ್ ಕೋಚಿಂಗ್ ತೆಗೆದುಕೊಳ್ಳುತ್ತಿದ್ದಳು. ಲಾಕ್ ಡೌನ್ ಕಾರಣ ಕ್ಯಾಂಪಸ್ ಮುಚ್ಚಿತ್ತು, ನಂತರ ರಂಜಿತಾ ಕೆಲವು ದಿನಗಳ ಹಿಂದೆ ಮನೆಗೆ ಬಂದಿದ್ದಳು.

ಆಕೆ ಸಹಪಾಠಿ ಜೊತೆ ಫೋನ್ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದಳು. ಆದರೆ, ಅವಳ ಗೆಳೆಯ ಮೂರು ದಿನಗಳಿಂದ ಫೋನ್ ಮಾಡಿರಲಿಲ್ಲ. ಅವಳು ಫೋನ್ ಮಾಡಿದರೆ, ಆತ ಫೋನ್ ಎತ್ತುತ್ತಿರಲಿಲ್ಲ. ಈ ಬಗ್ಗೆ ತೀವ್ರ ಮನನೊಂದ ರಂಜಿತಾ ಮಂಗಳವಾರ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಂಜೆ ಕೆಲಸ ಮುಗಿಸಿ ತಾಯಿ ಮನೆಗೆ ಬರುತ್ತಿದ್ದಂತೆ ರಂಜಿತಾ ಫ್ಯಾನ್ ಗೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ದಿಗ್ಬ್ರಮೆ ಗೊಂಡ ತಾಯಿ, ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile