ತಮ್ಮನನ್ನೇ ಇರಿದು ಕೊಂದ ಅಣ್ಣ ! ಬೆಳಗಾವಿಯಲ್ಲಿ ಘಟನೆ

ಅಣ್ಣನೊಬ್ಬ ತನ್ನ ತಮ್ಮನನ್ನೇ (Brother) ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗೋಕಾಕ್ ನಗರದಲ್ಲಿ ನಡೆದಿದೆ (Murder incident in Gokak city).

Online News Today Team

ಬೆಳಗಾವಿ (Belagavi): ಅಣ್ಣನೊಬ್ಬ ತನ್ನ ತಮ್ಮನನ್ನೇ (Brother) ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗೋಕಾಕ್ ನಗರದಲ್ಲಿ ನಡೆದಿದೆ (Murder incident in Gokak city).

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ (Gokak City in Belgaum district) ನಿವಾಸಿ ಮುನಾಫ್ ದೇಸಾಯಿ(24) ದುರ್ದೈವಿ. 26 ವರ್ಷದ ರಮಜಾನ್ ದೇಸಾಯಿ ತಮ್ಮನನ್ನೇ ಕೊಲೆ ಮಾಡಿದ ಆರೋಪಿ ಅಣ್ಣ.

ಭಾನುವಾರ ತಡರಾತ್ರಿ ಮುನಾಫ್ ದೇಸಾಯಿ ತನ್ನ ತಂದೆ-ತಾಯಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿರುವ ವೇಳೆ ಮಧ್ಯಪ್ರವೇಶಿಸಿ ರಮಜಾನ್ ತಂದೆ, ತಾಯಿಯನ್ನು ಯಾಕೆ ಬೈಯ್ಯುತ್ತಿದ್ಯಾ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ವಾಗ್ವಾದ ತಾರಕಕ್ಕೇರಿ ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಚಾಕುವಿನಿಂದ ಮುನಾಫ್ ಹೊಟ್ಟೆಗೆ ರಮಜಾನ್ ಇರಿದಿದ್ದಾನೆ (stabbed with a knife at home).

ತಮ್ಮನನ್ನೇ ಇರಿದು ಕೊಂದ ಅಣ್ಣ ! ಬೆಳಗಾವಿಯಲ್ಲಿ ಘಟನೆ

ಇದರಿಂದ ತೀವ್ರವಾಗಿ ಗಾಯಗೊಂಡ ಮುನಾಫ್‍ನನ್ನು ಆತನ ಪೋಷಕರು ಸರ್ಕಾರಿ ಆಸ್ಪತ್ರೆಗೆ (government hospital) ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮುನಾಫ್ ಸಾವನ್ನಪ್ಪಿದ್ದಾನೆ.

ಸದ್ಯ ಆರೋಪಿ ರಮಜಾನ್‍ನನ್ನು ಗೋಕಾಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು (accused has been taken into custody by Gokak police), ಘಟನಾ ಸ್ಥಳಕ್ಕೆ ಗೋಕಾಕ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೋಕಾಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (A case has been registered at the Gokak city police station).

Follow Us on : Google News | Facebook | Twitter | YouTube