Crime News: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಯುವಕನಿಗೆ 17 ಲಕ್ಷ ರೂಪಾಯಿ ವಂಚನೆ
ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಯುವಕನಿಗೆ 17 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರು ಮಾರತ್ತಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು (Bengaluru): ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಯುವಕನಿಗೆ 17 ಲಕ್ಷ ರೂಪಾಯಿ ವಂಚಿಸಿರುವ (youth was cheated) ಘಟನೆ ಬೆಂಗಳೂರು ಮಾರತ್ತಹಳ್ಳಿಯಲ್ಲಿ (Marathahalli) ನಡೆದಿದೆ.
ನಂದೀಶ್ (ವಯಸ್ಸು 33) ಬೆಂಗಳೂರಿನ ಮಾರತ್ತಹಳ್ಳಿಯವರು. ಅವರು ಸರ್ಕಾರಿ ಉದ್ಯೋಗಕ್ಕಾಗಿ (government job) ಪ್ರಯತ್ನಿಸುತ್ತಿದ್ದರು. ಈ ಹಂತದಲ್ಲಿ ಅವರು ಉತ್ತರಾಖಂಡದ (Uttarakhand) ಯೋಗೇಂದ್ರ ಅವರನ್ನು ಭೇಟಿಯಾದರು.
ಈ ವೇಳೆ ಆತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೇ ಪತ್ನಿ, ಸಂಬಂಧಿಕರು ಸರ್ಕಾರಿ ನೌಕರಿಯಲ್ಲಿದ್ದು, ಕೆಲವರು ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾನೆ.
ಅಷ್ಟೇ ಅಲ್ಲದೆ ವಿಧಾನಸೌಧದಲ್ಲಿ ಕಿರಿಯ ಸಹಾಯಕರ ಹುದ್ದೆಗಳು ಖಾಲಿ ಇವೆ ನನಗೆ ಬೇಕಾದವರು ಇದ್ದಾರೆ ಬೇಕಿದ್ದರೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.
ಇದೆ ರೀತಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ನಾನಾ ಕಂತುಗಳಲ್ಲಿ 17 ಲಕ್ಷ ರೂ. ಪಡೆದಿದ್ದಾನೆ. ಹಣ ಪಡೆದ ನಂತರ ಕೈಗೆ ಸಿಗದೇ ಕಣ್ಮರೆಯಾಗಿದ್ದಾನೆ. ಸೆಲ್ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೆ ಮೊಬೈಲ್ ಸ್ವಿಚ್ ಆಪ್ ಆಗಿದೆ. ಅಲ್ಲಿಗೆ ಹಣ ಕೊಟ್ಟ ನಂದೀಶ್ ತಾನು ಮೋಸ ಹೋಗಿರುವ (Fraud) ಬಗ್ಗೆ ಅರಿತುಕೊಂಡಿದ್ದಾರೆ.
ಸುಳ್ಳು ಹೇಳಿ ಯೋಗೇಂದ್ರ ಕೆಲಸ ಕೊಡಿಸುವುದಾಗಿ ಹಣ ಲಪಟಾಯಿಸಿರುವುದು ಗೊತ್ತಾಗಿದೆ. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಜಾಲ ಬೀಸಿದ್ದಾರೆ.
youth was cheated of Rs 17 lakh by claiming to get a government job in Bengaluru Marathahalli
Follow us On
Google News |
Advertisement