ಕಾರು, ಬೈಕ್ ಡಿಕ್ಕಿ Zomato ಡಲಿವರಿ ಬಾಯ್‌ ಸೇರಿ ಇಬ್ಬರು ಯುವತಿಯರು ಸಾವು

ಕಾರು-ಬೈಕ್ ಡಿಕ್ಕಿಯಾಗಿ Zomato ಡಲಿವರಿ ಬಾಯ್‌ ಸೇರಿದಂತೆ ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ

Online News Today Team

ನವದೆಹಲಿ: ಕಾರು-ಬೈಕ್ (Car Bike Accident) ಡಿಕ್ಕಿಯಾಗಿ Zomato ಡಲಿವರಿ ಬಾಯ್‌ ಸೇರಿದಂತೆ ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ನವದೆಹಲಿಯಲ್ಲಿ (Delhi) ನಡೆದಿದೆ. ಈಶಾನ್ಯ ದೆಹಲಿಯ ಶಕರ್‌ಪುರದಲ್ಲಿ ಶನಿವಾರ ಮಧ್ಯರಾತ್ರಿಯ ನಂತರ ಈ ಘಟನೆ ನಡೆದಿದೆ.

ಇಬ್ಬರು ಯುವತಿಯರು, ಅವರ ಕುಟುಂಬದ ಇತರ ಐವರು ಸದಸ್ಯರೊಂದಿಗೆ ಪಶ್ಚಿಮ ದೆಹಲಿಯ ಪಿರಾಗರ್ಹಿಯಿಂದ ಕರ್ಕರ್ಡುಮಾದಲ್ಲಿರುವ ತಮ್ಮ ಮನೆಗೆ ಕಾರಿನಲ್ಲಿ ಹಿಂತಿರುಗುತ್ತಿದ್ದರು. ವಾಹನದ ಮುಂಭಾಗದಲ್ಲಿ ಮೂವರು ಮತ್ತು ಹಿಂಬದಿಯಲ್ಲಿ ನಾಲ್ವರು ಇದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು ಲಕ್ಷ್ಮಿನಗರದ ಮೂಲಕ ಹಾದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ Zomato ಡಲಿವರಿ ಬಾಯ್‌ ಅಡ್ಡ ಬಂದಿದ್ದಾರೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಕಾರು, ಬೈಕ್ ಡಿಕ್ಕಿ Zomato ಡಲಿವರಿ ಬಾಯ್‌ ಸೇರಿ ಇಬ್ಬರು ಯುವತಿಯರು ಸಾವು

ಅಪಘಾತದಲ್ಲಿ Zomato ಡಲಿವರಿ ಬಾಯ್‌ ಜೊತೆಗೆ ಪಲ್ಟಿಯಾದ ಕಾರಿನಲ್ಲಿ ಸಿಕ್ಕಿಬಿದ್ದ 17 ವರ್ಷದ ಜ್ಯೋತಿ ಮತ್ತು 19 ವರ್ಷದ ಭಾರತಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಕಾರಿನಲ್ಲಿದ್ದ ಇತರ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ Zomato ಡಲಿವರಿ ಬಾಯ್‌ ಗುರುತು ಪತ್ತೆಯಾಗಿಲ್ಲ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದರು.

Follow Us on : Google News | Facebook | Twitter | YouTube