ಧಾರವಾಡ: ಡಿ.17 ರಂದು ಚಿಗುರು ಮಕ್ಕಳ ಹಬ್ಬ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಲು ಚಿಗುರು ಮಕ್ಕಳ ಹಬ್ಬವನ್ನು ಡಿ.17 ರಂದು ಬೆಳಿಗ್ಗೆ 11-30ಕ್ಕೆ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ ಸಭಾಭವನ ಧಾರವಾಡದಲ್ಲಿ ಆಯೋಜಿಸಲಾಗಿದೆ.

(Kannada News) : ಧಾರವಾಡ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಲು ಚಿಗುರು ಮಕ್ಕಳ ಹಬ್ಬವನ್ನು ಡಿ.17 ರಂದು ಬೆಳಿಗ್ಗೆ 11-30ಕ್ಕೆ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ ಸಭಾಭವನ ಧಾರವಾಡದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಶಿ.ಜಡಿ ಸಮಾರಂಭದ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಶಂಕರ ಹಲಗತ್ತಿ, ನವದೆಹಲಿಯ ಮಕ್ಕಳ ರಂಗ ನಿರ್ದೇಶಕಿ ಡಾ.ವೀಣಾ ಶರ್ಮ, ಪ್ರಸಾದನ ಕಲಾವಿದ ಸಂತೋಷ ಮಹಾಲೆ ಆಗಮಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭಾರಂಭದಲ್ಲಿ ಜಾನಪದ ಗೀತೆ, ತಬಲಾ ಸೋಲೋ, ಹಿಂದೂಸ್ತಾನಿ ಗಾಯನ, ಸುಗಮ ಸಂಗೀತ, ಗೊಂಬೆಯಾಟ, ಭರತನಾಟ್ಯ, ನೃತ್ಯ ರೂಪಕ, ಮಕ್ಕಳ ನಾಟಕ, ಭಾವಗೀತೆ,ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

Web Title : Chiguru Makkala Habba on December 17 in Dharwad

Scroll Down To More News Today