ರೈಲಿಗೆ ತಲೆಕೊಟ್ಟು ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ

SL Dharme Gowda Death - ಉಪಸಭಾಪತಿ ಎಸ್.ಎಲ್. ಧರ್ಮೇಗೌಡ (65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗುಣಸಾಗರ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧರ್ಮೇಗೌಡ ಅವರ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

(Kannada News) : SL Dharme Gowda Death – ಉಪಸಭಾಪತಿ ಎಸ್.ಎಲ್. ಧರ್ಮೇಗೌಡ (65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧರ್ಮೇಗೌಡ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗುಣಸಾಗರ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧರ್ಮೇಗೌಡ ಅವರ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

SL Dharme Gowda commits suicide
SL Dharme Gowda commits suicide

ಜೆಡಿಎಸ್ ಸದಸ್ಯ ಎಸ್.ಎಲ್. ಧರ್ಮೇಗೌಡ ನಿಧನ ( ಆತ್ಮಹತ್ಯೆ ಶಂಕೆ )

ಎಸ್ ಎಲ್ ಧರ್ಮೇಗೌಡ, ಎಚ್.ಡಿ. ಕುಮಾರಸ್ವಾಮಿಯ ಆಪ್ತ ಸ್ನೇಹಿತ. ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಗನ್ ಮ್ಯಾನ್ ಮತ್ತು ಎಸ್ಕಾರ್ಟ್ ಸಿಬ್ಬಂದಿಯನ್ನು ಮನೆಗೆ ಕಳುಹಿಸಿ, ತಮ್ಮ ಕಾರಿನಲ್ಲಿ ಏಕಾಂಗಿಯಾಗಿ ಮನೆಯಿಂದ ಹೊರಟರು.

ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ
ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ

ರಾತ್ರಿ 10 ಗಂಟೆಯಾದರೂ ಹಿಂತಿರುಗದ ಕಾರಣ ಅವರಿಗಾಗಿ ಹುಡುಕಾಟ ಶುರುವಾಗಿತ್ತು. ಗುಣಸಗರದ ಬಳಿ ಎಸ್.ಎಲ್.ಧರ್ಮೇಗೌಡ ಶವ ಪತ್ತೆಯಾಗಿದೆ.

ಸಿಟಿ ರವಿ ಮತ್ತು ಚಿಕ್ಕಮಗಳೂರು ಎಸ್.ಪಿ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಸ್.ಎಲ್.ಧರ್ಮೇಗೌಡ ಅವರು ಪತ್ನಿ ಮಮತಾ, ಮಗ ಸೋನಾಲ್, ಮಗಳು ಸೋನಾಲಿ ಅವರನ್ನ ಅಗಲಿದ್ದಾರೆ.

ವಿಧಾನ ಪರಿಷತ್‌ನಲ್ಲಿ ನಡೆದ ಸಂಘರ್ಷ
ವಿಧಾನ ಪರಿಷತ್‌ನಲ್ಲಿ ನಡೆದ ಸಂಘರ್ಷ

ಇತ್ತೀಚೆಗೆ ವಿಧಾನ ಪರಿಷತ್‌ನಲ್ಲಿ ನಡೆದ ಸಂಘರ್ಷದಿಂದ ಅವರು ತೀವ್ರವಾಗಿ ನೊಂದಿದ್ದರು. ಈ ಘಟನೆಯಿಂದಾಗಿ ಎಸ್.ಎಲ್.ಧರ್ಮೇಗೌಡ ಮಾನಸಿಕ ತುಂಬಾ ನೊಂದಿದ್ದರು ಎಂದು ಹೇಳಲಾಗಿದೆ.

Web Title : SL Dharme Gowda commits suicide

Scroll Down To More News Today