ವಿಶ್ವಗುರು ಬಸವಣ್ಣನವರ ಬಸವ ಜಯಂತಿ ಆಚರಣೆ ಕಾರ್ಯಕ್ರಮ

Basav Jayanti celebration of VishwaGuru Basavanna

ವಿಶ್ವಗುರು ಬಸವಣ್ಣನವರ ಬಸವ ಜಯಂತಿ ಆಚರಣೆ ಕಾರ್ಯಕ್ರಮ -Basav Jayanti celebration of VishwaGuru Basavanna

ವಿಶ್ವಗುರು ಬಸವಣ್ಣನವರ ಬಸವ ಜಯಂತಿ ಆಚರಣೆ ಕಾರ್ಯಕ್ರಮ

ಗುಳೇದಗುಡ್ಡ : ಇಲ್ಲಿನ ನೆಹರೂ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗುಳೇದಗುಡ್ಡದಲ್ಲಿ ಸಡಗರ ಸಂಭ್ರಮದೊಂದಿಗೆ ಅಣ್ಣ ಬಸವಣ್ಣ ಅವರ ಬಸವ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷರಾದ ಮಾಂತಯ್ಯ ಸರಗಣಾಚಾರಿ ಅವರು ಹೂ ಮಾಲೆಯನ್ನು ಅರ್ಪಿಸಿದರು. ನಂತರ ಅವರು ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾನರು ಯಾವುದೇ ಕೆಲಸದಲ್ಲಿ ಮೇಲು–ಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಹೌದು. ದೇಶದಲ್ಲಿ ಅನುಭವ ಮಂಟಪದ ಮೂಲಕ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದವರಲ್ಲಿ ಬಸವಣ್ಣ ಮೊದಲಿಗರು. ವಿದ್ಯೆಯಿಂದ ವಂಚಿರಾದವರಿಗೆ, ಮಹಿಳೆಯರಿಗೆ ಅಲ್ಲಿ ಶಿಕ್ಷಣ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕಾರಣರಾದರು ಎಂದು ತಿಳಿಸಿದರು.

ನಂತರ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಪ್ರಾಚಾರ್ಯರಾದ ಶ್ರೀ ಇ. ಸಾಯಿಕೃಷ್ಣ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ದುಡಿದು ತಿನ್ನುವ ಜೀವನವನ್ನು ನಾವೆಲ್ಲರೂ ಅಳವಡಿಸಿಕೊಂಡಾಗ ಬಸವಾದಿಶರಣರ ಕಾಯಕ ನಿಷ್ಠೆಗೆ ಅರ್ಥ ಬರುತ್ತದೆ”ಎಂದು ತಿಳಿಸಿದರು.

ಹಾಗೆ ಈ ಕಾರ್ಯಕ್ರಮದಲ್ಲಿ ಶ್ರೀ ಪ್ರದೀಪ.ಕೆ ಸರ್ ಶಾಲೆಯ ದ್ವಿತೀಯ ದರ್ಜೆ ಸಹಾಯಕರಾದ ಶ್ರೀ ಶಿವು ಕಳ್ಳಿಗುಡ್ಡ, ಶ್ರೀ ಮಲ್ಲಿಕಾರ್ಜುನ ಅಂಗಡಿ, ಶ್ರೀ ನಾಗೇಂದ್ರ ಪ್ರಸಾದ, ಶ್ರೀ ಚನಬಸಪ್ಪ ಚಿಕ್ಕಾಡಿ ಗ್ರಂಥಪಾಲಕರು ಇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.////